ಬಿಗ್‌ಬಾಸ್‌ನಲ್ಲಿ ಧನರಾಜ್ ಆಚಾರ್ ಕಣ್ಣೀರು, ವೀಕ್‌ ಮೈಂಡ್‌ನವರು ಹೋಗಬಾರದೆಂದ ನೆಟ್ಟಿಗರು

Sampriya

ಬುಧವಾರ, 2 ಅಕ್ಟೋಬರ್ 2024 (16:23 IST)
Photo Courtesy X
ಈ ಬಾರಿಯ ಬಿಗ್‌ಬಾಸ್ ಶುರುವಾದ ಮೊದಲ ದಿನವೇ ಸ್ಪರ್ಧಿಗಳ ಮಧ್ಯೆ ಜಗಳ ಶುರುವಾಗಿದೆ. ಮೊದಲ ವಾರದ ನಾಮಿನೇಷನ್ ನಿನ್ನೆ ಆರಂಭವಾಗಿದ್ದು, ಇಂದು ಟಾಸ್ಕ್ ವಿಚಾರವಾಗಿ ಲಾಯರ್ ಜಗದೀಶ್ ಹಾಗೂ ಧನರಾಜ್ ಆಚಾರ್ ನಡುವೆ ಜಗಳವಾಗಿದೆ.

ಇಂದು ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡ ವಾಹಿನಿಯಲ್ಲಿ ಟಾಸ್ಕ್ ಸಂಬಂಧ ಜಗದೀಶ್ ಅವರು ಧನರಾಜ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಇನ್ನೂ ತನ್ನ ಕಾಮಿಡಿ ವಿಡಿಯೋ ಮೂಲಕ ಎಲ್ಲರನ್ನು ನಗಿಸುತ್ತಿದ್ದ ಧನರಾಜ್ ಅವರು ಇದೀಗ ದೊಡ್ಮನೆಯಲ್ಲಿ ಆಗುತ್ತಿರುವ ಜಗಳದಿಂದ ಕಣ್ಣೀರು ಹಾಕಿದ್ದಾರೆ.

ಬಿಗ್‌ಬಾಸ್ ಬಳಿ ಮಾತನಾಡುವಾಗ ಸ್ಪರ್ಧಿಗಳ ನಡುವೆ ನಡೆಯುತ್ತಿರುವ ಗಲಾಟೆಯಿಂದ ಮಂಕಾಗಿದ್ದೇನೆ. ಹೇಗೆ ಇರಬೇಕೆಂದು ಗೊತ್ತಾಗ್ತಿಲ್ಲ ಎಂದು ಹೇಳಿಕೊಂಡಿದ್ದಾರೆ. ಧನರಾಜ್ ಕಣ್ಣೀರು ಹಾಕುತ್ತಿರುವುದನ್ನು ನೋಡಿದವರು ಬಗೆ ಬಗೆಯಾಗಿ ಕಮೆಂಟ್ ಮಾಡುತ್ತಿದ್ದಾರೆ.

ಮೊದಲನೇ ವಾರನೇ ಹೀಗೆ ಅಳ್ಕೊಂಡು ಕೂತ್ಕೊಂಡ್ರೆ ಹೇಗೆ, ವೀಕ್ ಮೈಂಡ್ ಇರುವವವರು ಬಿಗ್ ಬಾಸ್ ಗೆ ಹೋಗಬಾರದು.

ಮತ್ತೊಬ್ಬರು ಕಾಮಿಡಿ ವಿಡಿಯೋ ಮಾಡಿದಷ್ಟು ಸುಲಭ ಅಲ್ಲ ಅಂತ ಗೊತ್ತಾಗುತ್ತೆ ಬಿಡಿ ಎಂದು ಕಾಲೆಳೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ