BBK11: ಕಾಮಿಡಿ ಪೀಸ್ ಎಂದ ಲಾಯರ್ ಜಗದೀಶ್ ಗೆ ವಿಶಿಷ್ಟವಾಗಿ ಉತ್ತರ ಕೊಟ್ಟ ಧನರಾಜ್ ಆಚಾರ್ (Video)

Krishnaveni K

ಬುಧವಾರ, 2 ಅಕ್ಟೋಬರ್ 2024 (12:20 IST)
Photo Credit: X
ಬೆಂಗಳೂರು: ಬಿಗ್ ಬಾಸ್ ಸೀಸನ್ 11 ಆರಂಭವಾಗಿ ಎರಡೇ ದಿನದಲ್ಲಿ ಕಾವೇರುತ್ತಿದ್ದು, ಸೈಲೆಂಟ್ ಎಂದುಕೊಂಡಿದ್ದ ಧನರಾಜ್ ಆಚಾರ್ ಕೂಡಾ ತನ್ನನ್ನು ಕಾಮಿಡಿ ಪೀಸ್ ಎಂದಿದ್ದಕ್ಕೆ ಲಾಯರ್ ಜಗದೀಶ್ ಮೇಲೆ ಸಿಟ್ಟಾದ ಘಟನೆ ನಡೆದಿದೆ.

ಬಿಗ್ ಬಾಸ್ ಆರಂಭವಾಗಿ ಒಂದೇ ದಿನಕ್ಕೆ ಚೈತ್ರಾ ಕುಂದಾಪುರ ಮತ್ತು ಸ್ವರ್ಗ ನಿವಾಸಿಗಳ ನಡುವೆ ಕಿತ್ತಾಟ ನಡೆದಿತ್ತು. ನಿನ್ನೆ ನರಕ ನಿವಾಸಿಗಳಾದ ಮಾನಸ ಮತ್ತು ಚೈತ್ರಾ ಕುಂದಾಪುರ ಕಿತ್ತಾಡಿಕೊಂಡಿದ್ದರು. ಆದರೆ ಧನರಾಜ್ ಆಚಾರ್ ಕಿತ್ತಾಡಿದ ವಿಡಿಯೋ ಇಂದು ವೈರಲ್ ಆಗಿದೆ.

ಬಿಗ್ ಬಾಸ್ ಈ ವಾರದ ನಾಮಿನೇಷನ್ ಪ್ರಕ್ರಿಯೆಯ ಆಟವನ್ನು ಮನೆಯ ಸದಸ್ಯರಿಗೆ ನೀಡಿದೆ. ಈ ವೇಳೆ ರೂಲ್ಸ್ ವಿಚಾರದಲ್ಲಿ ಲಾಯರ್ ಜಗದೀಶ್ ಮತ್ತು ಧನರಾಜ್ ಆಚಾರ್ ನಡುವೆ ಕಿತ್ತಾಟವಾಗಿದೆ. ತಳ್ಳಬೇಡಿ ಎಂದು ಧನರಾಜ್ ಆಚಾರ್ ಹೇಳಿದ್ದಕ್ಕೆ ಜಗದೀಶ್ ಕಾಮಿಡಿ ಪೀಸ್ ನಿನ್ನ ಮಾತನ್ನು ಏನು ಕೇಳೋದು ಎಂದು ಹಂಗಿಸಿದ್ದಾರೆ.

ಇದು ಧನರಾಜ್ ಆಚಾರ್ ರನ್ನು ಕೆರಳಿಸಿದೆ. ಮಂಗನಂತೆ ಮುಖ ಮಾಡಿಕೊಂಡು ಜಗದೀಶ್ ಮಾತನ್ನು ಮಿಮಿಕ್ರಿ ಮಾಡಿ ಧನರಾಜ್ ತಿರುಗೇಟು ಕೊಟ್ಟಿದ್ದಾರೆ. ಧನರಾಜ್ ಸಿಟ್ಟಿನಲ್ಲೇ ಪ್ರತಿಕ್ರಿಯಿಸಿದರೂ ಅವರು ಪ್ರತಿಕ್ರಿಯಿಸಿದ ರೀತಿ ನೋಡಿ ಮನೆಯವರ ಮುಖದಲ್ಲಿ ನಗು ಮೂಡಿದೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Jinke Dhanraj ????????#BBK11 #BBKS11 pic.twitter.com/5PrnYlr5uq

— ಗುಗ್ಗು | GuGGu (@GuGGu_07) October 2, 2024

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ