ಕೈವ ಟ್ರೈಲರ್ ಲಾಂಚ್ ವೇಳೆ ಡಿ ಬಾಸ್ ದರ್ಶನ್ ಗೆ ಕರು ಗಿಫ್ಟ್ ಮಾಡಿದ ನಟ ಧನ್ವೀರ್ ಗೌಡ

ಮಂಗಳವಾರ, 28 ನವೆಂಬರ್ 2023 (09:20 IST)
Photo Courtesy: Twitter
ಬೆಂಗಳೂರು: ಕೈವ ಸಿನಿಮಾ ಟ್ರೈಲರ್ ಲಾಂಚ್ ಗೆ ಬಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಧನ್ವೀರ್ ಗೌಡ ಕ್ಯೂಟ್ ಗಿಫ್ಟ್ ಒಂದನ್ನು ಕೊಟ್ಟಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಪ್ರಾಣಿಗಳೆಂದರೆ ಭಾರೀ ಪ್ರೀತಿ. ತಮ್ಮ ಫಾರ್ಮ್ ಹೌಸ್ ನಲ್ಲಿ ಅನೇಕ ಪ್ರಾಣಿ-ಪಕ್ಷಿಗಳನ್ನು ತಮ್ಮ ಮನೆಯ ಮಕ್ಕಂತೇ ಸಾಕುತ್ತಿದ್ದಾರೆ.

ಅದೇ ಕಾರಣಕ್ಕೆ ಕೈವ ಟ್ರೈಲರ್ ಲಾಂಚ್ ಗೆ ಬಂದ ದರ್ಶನ್ ಗೆ ಧನ್ವೀರ್ ಗೌಡ ಅವರು ಇಷ್ಟಪಡುವಂತಹದ್ದೇ ಗಿಫ್ಟ್ ಕೊಟ್ಟಿದ್ದಾರೆ. ಮುದ್ದಾದ ಕರುವೊಂದನ್ನು ವೇದಿಕೆಗೆ ತಂದು ದರ್ಶನ್ ಗೆ ಸರ್ಪೈಸ್ ಗಿಫ್ಟ್ ಕೊಟ್ಟಿದ್ದಾರೆ. ಅವರ ಗಿಫ್ಟ್ ನೋಡಿ ಸ್ವತಃ ದರ್ಶನ್ ಗೆ ಅಚ್ಚರಿ ಜೊತೆಗೆ ಖುಷಿಯಾಗಿದೆ.

ದರ್ಶನ್ ರನ್ನು ಧನ್ವೀರ್ ತಮ್ಮ ಸ್ವಂತ ಅಣ್ಣನಂತೆ ಕಾಣುತ್ತಾರೆ. ಹೀಗಾಗಿ ದರ್ಶನ್ ಗೆ ತಕ್ಕುದಾದ ಉಡುಗೊರೆಯನ್ನೇ ನೀಡಿದ್ದಾರೆ. ಕೈವ ಟ್ರೈಲರ್ ಲಾಂಚ್ ನಲ್ಲಿ ದರ್ಶನ್, ಧನ್ವೀರ್ ಗೌಡ, ನಾಯಕಿ ಮೇಘಾ ಶೆಟ್ಟಿ, ನಿರ್ದೇಶಕ ಜಯತೀರ್ಥ, ಮಹೇಶ್ ಕುಮಾರ್ ಸೇರಿದಂತೆ ಇಡೀ ಚಿತ್ರತಂಡವಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ