ಕೈವ ಟ್ರೈಲರ್ ಲಾಂಚ್ ಇಂದು: ಡಿ ಬಾಸ್ ದರ್ಶನ್ ಉಪಸ್ಥಿತಿಯಲ್ಲಿ ಅದ್ಧೂರಿ ಕಾರ್ಯಕ್ರಮ
ಕೈವ ಸಿನಿಮಾದಲ್ಲಿ ಹಿಂದೂ ಯುವಕ ಮತ್ತು ಮುಸ್ಲಿಂ ಯುವತಿಯ ನಡುವಿನ ಪ್ರೇಮಕತೆಯಿದೆ. ಜೊತೆಗೆ ಭರಪೂರ ಆಕ್ಷನ್ ದೃಶ್ಯಗಳಿವೆ. ಈ ಸಿನಿಮಾದ ಟೀಸರ್, ಹಾಡು ಈಗಾಗಲೇ ವೀಕ್ಷಕರ ಮನಗೆದ್ದಿದೆ.
ಡಿಸೆಂಬರ್ 8 ರಂದು ಥಿಯೇಟರ್ ನಲ್ಲಿ ಬಿಡುಗಡೆಯಾಗುತ್ತಿದೆ. ಇದಕ್ಕೆ ಪೂರ್ವಭಾವಿಯಾಗಿ ಇಂದು ಕೆಎಲ್ ಇ ಮೈದಾನದಲ್ಲಿ ಅದ್ಧೂರಿಯಾಗಿ ಟ್ರೈಲರ್ ಲಾಂಚ್ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
ಈ ಕಾರ್ಯಕ್ರಮಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅತಿಥಿಯಾಗಿ ಆಗಮಿಸಲಿದ್ದಾರೆ. ಧನ್ವೀರ್ ಹಾಗೂ ಮೇಘಾ ಇಬ್ಬರೂ ದರ್ಶನ್ ಅಪ್ಪಟ ಅಭಿಮಾನಿಗಳು. ತಮ್ಮ ಸಿನಿಮಾ ಟ್ರೈಲರ್ ನ್ನು ದರ್ಶನ್ ಬಿಡುಗಡೆ ಮಾಡುತ್ತಿರುವ ಖುಷಿಯಲ್ಲಿದ್ದಾರೆ.