ಸಿನಿಮಾ ಸ್ಟಾರ್ ಗಳದ್ದು ಈಗ ಪಂಚೆ ಸ್ಟೈಲ್!
ಮಾನ್ಸೂನ್ ರಾಗ ಸಿನಿಮಾದಲ್ಲಿ ಡಾಲಿ ಧನಂಜಯ್ ಪಂಚೆ ಉಟ್ಟುಕೊಂಡು ಗಮನ ಸೆಳೆದಿದ್ದರು. ಹೀಗಾಗಿ ಚಿತ್ರದ ಪ್ರಚಾರ ಸಂದರ್ಭದಲ್ಲೂ ಡಾಲಿ ಪಂಚೆ ಉಟ್ಟುಕೊಂಡೇ ಬಂದಿದ್ದರು.
ಇದೀಗ ಕಾಂತಾರ ಸಿನಿಮಾ ಸ್ಟಾರ್ ರಿಷಬ್ ಶೆಟ್ಟಿ ಎಲ್ಲೇ ಹೋದರೂ ಪಂಚೆಯಲ್ಲೇ ಮಿಂಚುತ್ತಿದ್ದಾರೆ. ರಿಷಬ್ ಕಾಂತಾರ ಸಿನಿಮಾದಲ್ಲಿ ಪಂಚೆ ಉಟ್ಟುಕೊಳ್ಳುತ್ತಾರೆ. ಹೀಗಾಗಿ ಅವರೀಗ ಎಲ್ಲೇ ಕಾರ್ಯಕ್ರಮಕ್ಕೆ, ಸಂದರ್ಶನಕ್ಕೆ ಹೋಗುವುದಿದ್ದರೂ ಕಪ್ಪು ಅಥವಾ ಬಿಳಿ ಬಣ್ಣದ ಪಂಚೆ ಉಟ್ಟುಕೊಳ್ಳುತ್ತಾರೆ. ಅವರ ಸ್ನೇಹಿತ, ನಟ ರಾಜ್ ಬಿ ಶೆಟ್ಟಿ ಕೂಡಾ ಪಂಚೆ ಉಡುತ್ತಿದ್ದಾರೆ. ಹೀಗಾಗಿ ಈಗ ಪಂಚೆ ಸ್ಟೈಲ್ ಟ್ರೆಂಡ್ ಆಗುತ್ತಿದೆ.
Edited by Rajesh Patil