ರಸ್ತೆ ಬದಿ ಕೂತು ಜಂಬೂ ದಸರಾ ವೀಕ್ಷಿಸಿದ ಡಾ.ರಾಜ್ ಕುಟುಂಬ

ಗುರುವಾರ, 6 ಅಕ್ಟೋಬರ್ 2022 (08:50 IST)
ಮೈಸೂರು: ಮೈಸೂರಿನಲ್ಲಿ ನಿನ್ನೆ ದಸರಾ ಜಂಬೂ ಸವಾರಿ ಕಾರ್ಯಕ್ರಮವನ್ನು ಡಾ.ರಾಜ್ ಕುಟುಂಬ ರಸ್ತೆ ಬದಿ ಕೂತು ಜನ ಸಾಮಾನ್ಯರಂತೇ ವೀಕ್ಷಣೆ ಮಾಡಿದೆ.

ಡಾ. ರಾಜ್ ಮೊಮ್ಮಗ ವಿನಯ್ ರಾಜ್ ಕುಮಾರ್ ಹಾಗೂ ಕುಟುಂಬದವರು ಅರಮನೆ ಹೆಬ್ಬಾಗಿಲ ಮುಂದಿನ ರಸ್ತೆಯ ಮೆಟ್ಟಿಲುಗಳ ಮೇಲೆ ಕೂತು ದಸರಾ ವೀಕ್ಷಣೆ ಮಾಡಿದ್ದಾರೆ.

ದೊಡ್ಮನೆಯವರ ಈ ಸರಳತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಬಾರಿ ದಸರಾದಲ್ಲಿ ಪವರ್ ಸ್ಟಾರ್ ಪುನೀತ್ ಗೆ ವಿಶೇಷ ಗೌರವ ಸಲ್ಲಿಸಲಾಗಿತ್ತು.

-Edited by Rajesh Patil

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ