ರಶ್ಮಿಕಾ ಮಂದಣ್ಣ-ಧ್ರುವ ಸರ್ಜಾ ಪೊಗರು ಸಿನಿಮಾದಲ್ಲಿ ಏನಿದೆ? ಇಂದು ಗೊತ್ತಾಗುತ್ತೆ!

ಗುರುವಾರ, 24 ಅಕ್ಟೋಬರ್ 2019 (09:07 IST)
ಬೆಂಗಳೂರು: ಯಜಮಾನ ಸಿನಿಮಾ ಬಳಿಕ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅಭಿನಯದ ಸಿನಿಮಾವೊಂದು ತೆರೆಗೆ ಬರಲು ಸಿದ್ಧವಾಗಿದ್ದು, ಇಂದು ಡೈಲಾಗ್ ಟ್ರೈಲರ್ ಬಿಡುಗಡೆಯಾಗುತ್ತಿದೆ.


ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ-ರಶ್ಮಿಕಾ ಜೋಡಿಯಾಗಿ ನಟಿಸಿರುವ ಪೊಗರು ಸಿನಿಮಾದ ಡೈಲಾಗ್ ಟ್ರೈಲರ್ ಇಂದು ಬಿಡುಗಡೆಯಾಗುತ್ತಿದೆ. ಧ್ರುವ ಸರ್ಜಾ ಅಭಿನಯದ ಸಿನಿಮಾವೆಂದರೆ ಅಲ್ಲಿ ಭರ್ಜರಿ ಡೈಲಾಗ್ ಗಳಿರುತ್ತವೆ.

ನಂದ ಕಿಶೋರ್ ನಿರ್ದೇಶನದ ಈ ಸಿನಿಮಾದ ಟೈಟಲ್, ಧ್ರುವ ಸರ್ಜಾ ಲುಕ್ ನೋಡಿದರೆ ಭರ್ಜರಿ ಸಾಹಸ ದೃಶ್ಯಗಳಿಗೇನೂ ಕಡಿಮೆಯಿರಲ್ಲ ಎಂಬುದು ಪಕ್ಕಾ ಆಗುತ್ತದೆ. ಆದರಲ್ಲೂ ಹಾಲಿವುಡ್ ನಟನ ಜತೆಗೆ ಧ್ರುವ ಸರ್ಜಾ ಕ್ಲೈಮ್ಯಾಕ್ಸ್ ಸೀನ್ ಮಾಡಿದ್ದಾರೆ. ಹೀಗಾಗಿ ಭರ್ಜರಿ ಹೊಡೆದಾಟದ ಟ್ರೈಲರ್ ಬರುವುದಂತೂ ಖಂಡಿತಾ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ