ಬೆಂಗಳೂರು: ಅಣ್ಣ ಚಿರಂಜೀವಿ ಸರ್ಜಾ ಕೊನೆಯದಾಗಿ ನಟಿಸಿದ ರಾಜಮಾರ್ತಂಡ ಸಿನಿಮಾಗೆ ತಮ್ಮ ಧ್ರುವ ಸರ್ಜಾ ಡಬ್ಬಿಂಗ್ ಮಾಡಿಕೊಟ್ಟಿದ್ದಾರೆ.
ಅಣ್ಣನ ಅಕಾಲಿಕ ನಿಧನದ ಬಳಿಕ ಧ‍್ರುವ ಅವನ ಸಿನಿಮಾಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತೇನೆಂದು ನಿರ್ಮಾಪಕರಿಗೆ ಭರವಸೆ ಕೊಟ್ಟಿದ್ದರು. ಅದರಂತೆ ಇದೀಗ ಅಣ್ಣನ ಪಾತ್ರಕ್ಕೆ ತಾವೇ ಧ‍್ವನಿ ಕೊಟ್ಟು, ಸಿನಿಮಾ ಪೂರ್ತಿ ಮಾಡಿಕೊಟ್ಟಿದ್ದಾರೆ. ಚಿರಂಜೀವಿ ತಮ್ಮ ಸಾವಿಗೆ ಮೊದಲು ಚಿತ್ರೀಕರಣ ಪೂರ್ತಿಮಾಡಿದ್ದರು. ಆದರೆ ಡಬ್ಬಿಂಗ್ ಮಾತ್ರ ಬಾಕಿಯಿತ್ತು. ಅದೀಗ ತಮ್ಮನ ಮೂಲಕ ಪೂರ್ತಿಯಾಗಿದೆ.