ಚಿರು-ಮೇಘನಾ ಮಗುವಿಗೆ ಧ್ರುವ ಸರ್ಜಾ ಭರ್ಜರಿ ಗಿಫ್ಟ್ ರೆಡಿ!
ಬುಧವಾರ, 21 ಅಕ್ಟೋಬರ್ 2020 (09:22 IST)
ಬೆಂಗಳೂರು: ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಮೊದಲ ಮಗುವಿಗೆ ಸಹೋದರ ಧ್ರುವ ಸರ್ಜಾ ಭರ್ಜರಿ ಉಡುಗೊರೆಯೊಂದನ್ನು ರೆಡಿ ಮಾಡಿಟ್ಟುಕೊಂಡಿದ್ದಾರೆ.
ಅಣ್ಣನನ್ನು ಕಳೆದುಕೊಂಡ ದುಃಖದಲ್ಲಿದ್ದರೂ ಧ್ರುವ ಅತ್ತಿಗೆಯನ್ನು ಪ್ರೀತಿಯಿಂದಲೇ ನೋಡಿಕೊಳ್ಳುತ್ತಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಮೇಘನಾಗೆ ಹೆರಿಗೆಯಾಗಲಿದೆ. ಮೊನ್ನೆಯಷ್ಟೇ ಕುಟುಂಬಸ್ಥರು ಚಿರು ಆಸೆಯಂತೆ ಅದ್ಧೂರಿಯಾಗಿ ಸೀಮಂತ ಶಾಸ್ತ್ರ ನೆರವೇರಿಸಿದ್ದರು. ಇದೀಗ ಧ್ರುವ ಅಣ್ಣನ ಮಗುವಿಗಾಗಿ ಬೆಳ್ಳಿಯ ತೊಟ್ಟಿಲು ಖರೀದಿ ಮಾಡಿದ್ದಾರೆ. ಆ ಮೂಲಕ ಚಿಕ್ಕಪ್ಪ ಧ್ರುವ ಮುಂದೆ ಬರಲಿರುವ ಮಗುವನ್ನು ಸ್ವಾಗತಿಸಲು ಭರ್ಜರಿಯಾಗಿ ತಯಾರಾಗಿದ್ದಾರೆ.