ಧ್ರುವ ಸರ್ಜಾ ಪೊಗರು ಶೂಟಿಂಗ್ ಶುರು

ಶುಕ್ರವಾರ, 25 ಸೆಪ್ಟಂಬರ್ 2020 (09:53 IST)
ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ-ರಶ್ಮಿಕಾ ಮಂದಣ್ಣ ಅಭಿನಯದ ಪೊಗರು ಸಿನಿಮಾದ ಶೂಟಿಂಗ್ ಲಾಕ್ ಡೌನ್ ಬಳಿಕ ಮತ್ತೆ ಶುರುವಾಗಿದೆ.


ಅಣ್ಣ ಚಿರು ಸರ್ಜಾ ಸಾವಿನ ಬಳಿಕ ಧ‍್ರುವ ಮನೆಯಿಂದ ಹೊರಗೆ ಬಂದಿದ್ದೇ ಅಪರೂಪ. ಈಗ ಮತ್ತೆ ತಮ್ಮ ವೃತ್ತಿಜೀವನದಲ್ಲಿ ತೊಡಗಿಸಿಕೊಳ್ಳಲು ಧ‍್ರುವ ನಿರ್ಧರಿಸಿದ್ದಾರೆ. ಪೊಗರು ಸಿನಿಮಾದ ಖರಾಬು ಹಾಡು ಈಗಾಗಲೇ ದಾಖಲೆಯ ವೀಕ್ಷಣೆ ಪಡೆದಿದೆ. ಈ ಸಿನಿಮಾದ ಹಾಡೊಂದನ್ನು ಕೋಟಿ ವೆಚ್ಚದಲ್ಲಿ ಚಿತ್ರೀಕರಿಸಲಾಗುತ್ತದೆ ಎಂಬ ಸುದ್ದಿಯಿದೆ. ಈ ಸಿನಿಮಾ ಅದ್ಧೂರಿಯಾಗಿ ಮೂಡಿಬರಲಿರುವುದಂತೂ ಖಂಡಿತಾ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ