ಸ್ವಾತಂತ್ರ್ಯೋತ್ಸವ ಪ್ರಯುಕ್ತ ಮಾರ್ಟಿನ್ ಹೊಸ ಪೋಸ್ಟರ್ ರಿಲೀಸ್

ಸೋಮವಾರ, 15 ಆಗಸ್ಟ್ 2022 (08:50 IST)
ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಾಯಕರಾಗಿರುವ ಪ್ಯಾನ್ ಇಂಡಿಯಾ ಸಿನಿಮಾ ಮಾರ್ಟಿನ್ ಕಡೆಯಿಂದು ಇಂದು ಅಭಿಮಾನಿಗಳಿಗೆ ಹೊಸ ಅಪ್ ಡೇಟ್ ಸಿಗಲಿದೆ.

ಇಂದು ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಚಿತ್ರತಂಡ ಮಾರ್ಟಿನ್ ಹೊಸ ಪೋಸ್ಟರ್ ಬಿಡುಗಡೆ ಮಾಡಲು ನಿರ್ಧರಿಸಿದೆ. ಸಿನಿಮಾ ರಿಲೀಸ್ ದಿನಾಂಕ ಮುಂದೂಡಿಕೆಯಾಗಿರುವ ಬೇಸರದಲ್ಲಿರುವ ಅಭಿಮಾನಿಗಳಿಗೆ ಇದು ಖುಷಿ ನೀಡಲಿದೆ.

ಇಂದು ಬೆಳಿಗ್ಗೆ 10.5 ಕ್ಕೆ ಚಿತ್ರದ ಹೊಸ ಪೋಸ್ಟರ್ ಬಿಡುಗಡೆಯಾಗಲಿದೆ. ಉದಯ್ ಕೆ ಮೆಹ್ತಾ ನಿರ್ಮಾಣದ ಸಿನಿಮಾಗೆ ಎಪಿ ಅರ್ಜುನ್ ಆಕ್ಷನ್ ಕಟ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ