ಡಿಜಿಟಲ್ ’ಬಾಷಾ’ ಚಿತ್ರಕ್ಕೆ ಸೆಲ್ಯೂಟ್ ಹೊಡೆದ ತಲೈವಾ

ಶನಿವಾರ, 31 ಡಿಸೆಂಬರ್ 2016 (09:37 IST)
ಸೂಪರ್ ಸ್ಟಾರ್ ರಜನಿಕಾಂತ್ ಅವರ ವೃತ್ತಿಬದುಕಿನಲ್ಲಿ ಒಂದು ಅಪರೂಪದ ಮೈಲಿಗಲ್ಲು ಎಂದರೆ ಬಾಷಾ ಚಿತ್ರ. 1995ರಲ್ಲಿ ಬಿಡುಗಡೆಯಾದ ಈ ಚಿತ್ರ ಬಾಕ್ಸ್ ಆಫೀಸಲ್ಲಿ ಲುಂಗಿ ಡ್ಯಾನ್ಸ್ ಮಾಡಿತ್ತು. ಇದೀಗ ಈ ಚಿತ್ರದ ಡಿಜಿಟಲ್ ಆವೃತ್ತಿ ಸಿದ್ಧವಾಗುತ್ತಿದೆ.
 
ಸತ್ಯ ಮೂವೀಸ್ ಸಂಸ್ಥೆ ತಮಿಳು ಚಿತ್ರೋದ್ಯಮದಲ್ಲಿ 50 ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ ಅದ್ದೂರಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ’ಬಾಷಾ’ ಡಿಜಿಟಲ್ ಆವೃತ್ತಿ ಬಿಡುಗಡೆಯಾಗಲಿದೆ. ಅಭಿಮಾನಿಗಳು ಹೊಸ ವರ್ಷಕ್ಕೆ ರಜನಿಕಾಂತ್ ಸಿನಿಮಾ ನೋಡುವ ಸೌಭಾಗ್ಯ ಮತ್ತೊಮ್ಮೆ ಸಿಗುತ್ತಿದೆ.
 
ಈಗಾಗಲೆ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಬಾಷಾ ಡಿಜಿಟಲ್ ಆವೃತ್ತಿ ತೋರಿಸಲಾಗಿದೆ. ಅವರಂತೂ ತುಂಬಾ ಖುಷಿಯಾದರು. ಏನೆಲ್ಲಾ ತಾಂತ್ರಿಕತೆ ಉಪಯೋಗಿಸಿದ್ದೇವೆ ಎಂಬುದನ್ನು ಅವರಿಗೆ ವಿವರಿಸಿದೆವು. ಥಿಯೇಟರ್‌ಗಳಲ್ಲಿ ಸಿನಿಮಾ ಯಶಸ್ವಿಯಾಗಬೇಕೆಂದು ಅವರು ಆಶೀರ್ವದಿಸಿದ್ದಾರೆ ಎಂದು ಸತ್ಯ ಮೂವೀಸ್‌ನ ತಂಗರಾಜು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ