ಸ್ಯಾಂಡಲ್ ವುಡ್ ನ ನಟ, ನಿರ್ದೇಶಕ ಎ.ಆರ್. ಬಾಬು ಇನ್ನಿಲ್ಲ
ಮಂಗಳವಾರ, 4 ಡಿಸೆಂಬರ್ 2018 (11:54 IST)
ಬೆಂಗಳೂರು : ಸ್ಯಾಂಡಲ್ ವುಡ್ ನ ನಟ, ನಿರ್ದೇಶಕ ಎ.ಆರ್. ಬಾಬು ಅವರು ಇಂದು ಬೆಳಗ್ಗೆ 8.55ಕ್ಕೆ ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
56 ವರ್ಷ ವಯಸ್ಸಿನ ಎ.ಆರ್ ಬಾಬು ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದು ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಅವರು ಆಸ್ಪತ್ರೆಯಲ್ಲಿಯೇ ನಿಧನರಾಗಿದ್ದಾರೆ.
ಎ.ಆರ್ ಬಾಬು ಅವರು ಹಲೋ ಯಮ, ಸಪ್ನೊಂಕಿ ರಾಣಿ, ಕೂಲಿ ರಾಜ, ಖಳನಾಯಕ, ಮರುಜನ್ಮ, ಯಾರ್ದೋ ದುಡ್ಡು ಯಲ್ಲಮನ ಜಾತ್ರೆ, ಚಮ್ಕಾಯಿಸಿ ಚಿಂದಿ ಉಡಾಯಿಸಿ ಸಿನಿಮಾಗಳನ್ನ ನಿರ್ದೇಶನ ಮಾಡಿದ್ದಾರೆ. ಹಾಗೇ ನಿರ್ದೇಶನದ ಜೊತೆಗೆ ಅವರು ಕೆಲವು ಸಿನಿಮಾಗಳಲ್ಲಿಯೂ ಅಭಿನಯಿಸಿದ್ದರು, ಅಲ್ಲದೇ ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಜೋಗಿ ಪ್ರೇಮ್ ಅವರನ್ನು ಸ್ಯಾಂಡಲ್ ವುಡ್ ಗೆ ಪರಿಚಯಿಸಿದ್ದು ಇವರೇ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.