ಲಾಕ್ ಡೌನ್ ನಡುವೆ ಮದುವೆಯಾಗಿದ್ದ ನಿರ್ದೇಶಕಿ ಸುಮನಾ ಕಿತ್ತೂರು: ಫೋಟೋಗಳು ಈಗ ವೈರಲ್

ಸೋಮವಾರ, 25 ಮೇ 2020 (10:06 IST)
ಬೆಂಗಳೂರು: ಕಿರಗೂರಿನ ಗಯ್ಯಾಳಿಗಳು ಸಿನಿಮಾ ಖ್ಯಾತಿಯ ಸ್ಯಾಂಡಲ್ ವುಡ್ ನಿರ್ದೇಶಕಿ ಸುಮನಾ ಕಿತ್ತೂರು ಲಾಕ್ ಡೌನ್ ನಡುವೆ ಸದ್ದಿಲ್ಲದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.


ತಮಿಳುನಾಡು ಮೂಲದ ಸಾಫ್ಟ್ ವೇರ್ ಇಂಜಿನಿಯರ್ ಶ್ರೀನಿವಾಸ್ ಎಂಬವರನ್ನು ಏಪ್ರಿಲ್ 17 ರಂದು ಸುಮನಾ ವಿವಾಹವಾಗಿದ್ದಾರೆ ಎಂದು ಗೊತ್ತಾಗಿದೆ. ಆದರೆ ಇವರ ವಿವಾಹ ವಿಚಾರ ಈಗ ಬಯಲಾಗಿದೆ.

ಪಾಂಡಿಚೇರಿಯಲ್ಲಿರುವ ವರನ ಮನೆಯಲ್ಲಿ ವಿವಾಹ ಕಾರ್ಯಕ್ರಮಗಳು ನೆರವೇರಿದೆಯಂತೆ. ಇದೀಗ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ