'ನಿನಗಾಗಿ' ಎನ್ನುತ್ತಾ ಕಿರುತೆರೆಗೆ ರೀ ಎಂಟ್ರಿ ಕೊಟ್ಟ ದಿವ್ಯ ಉರುಡುಗ

Sampriya

ಮಂಗಳವಾರ, 9 ಏಪ್ರಿಲ್ 2024 (19:46 IST)
photo Courtesy Instagram
ಬೆಂಗಳೂರು:  ಬಿಗ್ ಬಾಸ್ ಖ್ಯಾತಿಯ ದಿವ್ಯ ಉರುಡುಗ ಮತ್ತೇ ಕಿರುತೆರೆಗೆ ರೀ ಎಂಟ್ರಿ ಕೊಡುತ್ತಿದ್ದಾರೆ. ಕಲರ್ಸ್ ಕನ್ನಡದ 'ನಿನಗಾಗಿ' ಎಂಬ ಸೀರಿಯಲ್‌ನಲ್ಲಿ ಸೂಪರ್ ಸ್ಟಾರ್ ಆಗಿ ಮಿಂಚಲು ಮಲೆನಾಡಿನ ಬೆಡಗಿ ರೆಡಿಯಾಗಿದ್ದಾರೆ.

ಇನ್ನೂ ದಿವ್ಯಾ ರೀ ಎಂಟ್ರಿಗೆ ಅಭಿಮಾನಿಗಳು ಖುಷಿಯಾಗಿದ್ದು, ಅವರಿಗೆ ಗುಡ್‌ಲಕ್ ಎಂದು ವಿಶ್ ಮಾಡುತ್ತಿದ್ದಾರೆ.

ಇನ್ನೂ ನಿನಗಾಗಿ ಸೀರಿಯಲ್‌ನಲ್ಲಿ ರಚನಾ ಪಾತ್ರಕ್ಕೆ ಬಣ್ಣ ಹಚ್ಚಿರುವ ಇವರು ಸ್ಟಾರ್ ಆಗಿ ಮಿಂಚುತ್ತಿರುವ ಸಿನಿಮಾ ನಾಯಕಿಯ ಕಥೆಯನ್ನು ಹೇಳೋಕೆ ಹೊರಟಿದ್ದಾರೆ. ಸಿನಿಮಾ ಸ್ಟಾರ್ ಆಗಿರುವ ರಚನಾ ಬಾಳಿನ ಕಹಾನಿಯನ್ನು 'ನಿನಗಾಗಿ' ಸೀರಿಯಲ್ ಮೂಲಕ ಹೇಳಲಿದ್ದಾರೆ.

ಇನ್ನೂ ಸೀರಿಯಲ್ ಪ್ರಸಾರದ ಹೊತ್ತು ಹಾಗೂ ದಿನಾಂಕ ನಿಗದಿಯಾಗಿಲ್ಲ. ಆದರೆ ಶೀಘ್ರದಲ್ಲೇ ಮಾತ್ರ ನಿಮ್ಮ ಮುಂದೆ ಬರಲಿದ್ದು, ಪ್ರೋಮ್ರೋದಲ್ಲಿ ದಿವ್ಯಾ ಲುಕ್‌ಗೆ ಎಲ್ಲರೂ ಫಿದಾ ಆಗಿದ್ದಾರೆ.

ಇನ್ನು ದಿವ್ಯ ಉರುಡುಗ ಅವರು ಬಿಗ್‌ಬಾಸ್‌ಗೆ ಹೋಗಿ ಬಂದ್ಮೇಲೆ ತುಂಬಾನೇ ಫೇಮಸ್ ಆಗಿದ್ದರು. ಇನ್ನೂ ಸಹ ಸ್ಪರ್ಧಿ ಅರವಿಂದ್ ಹಾಗೂ ದಿವ್ಯಾ ಕ್ಯೂಟ್ ಜೋಡಿಗೆ ದೊಡ್ಡ ಅಭಿಮಾನಿಗಳ ಬಳಗವಿದೆ. ದಿವ್ಯಾ ಉರುಡುಗ ಮತ್ತು ಅರವಿಂದ್ ಕೆಪಿ ಜೋಡಿಯಾಗಿ  'ಅರ್ದಂ ಬರ್ಧ ಪ್ರೇಮ ಕಥೆ' ಸಿನಿಮಾದಲ್ಲಿ ನಟಿಸಿದ್ದರು.

ಇದೀಗ ಮತ್ತೇ ದಿವ್ಯ ಅವರು ಕಿರುತೆರೆಗೆ ಎಂಟ್ರಿ ಕೊಡುವ ಮೂಲಕ ಎರಡನೇ ಇನ್ನಿಂಗ್ಸ್ ಶುರು ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ