ಸಿಹಿ ಕಹಿ ಚಂದ್ರು ಅಡುಗೆ ಶೋನಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಶನಿವಾರ, 5 ಆಗಸ್ಟ್ 2023 (17:48 IST)
ಬೆಂಗಳೂರು: ಖ್ಯಾತ ನಟ ಸಿಹಿ ಕಹಿ ಚಂದ್ರು ಸ್ಟಾರ್ ಸುವರ್ಣ ವಾಹಿನಿಗಾಗಿ ನಡೆಸಿಕೊಡುವ ಬೊಂಬಾಟ್ ಭೋಜನ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯೊಬ್ಬರು ಆಗಮಿಸಲಿದ್ದಾರೆ.
 

ಬೊಂಬಾಟ್ ಭೋಜನ ಎಂಬ ಅಡುಗೆ ಕಾರ್ಯಕ್ರಮಕ್ಕೆ ಅನೇಕ ಸೆಲೆಬ್ರಿಟಿಗಳು ಬಂದು ಹೋಗಿದ್ದಾರೆ. ಈ ಬಾರಿ ಸಿಹಿ ಕಹಿ ಚಂದ್ರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಆಹ್ವಾನಿಸಿದ್ದಾರೆ.

ಈಗಾಗಲೇ ಡಿಕೆಶಿ ಭಾಗಿಯಾಗಿರುವ ಎಪಿಸೋಡ್ ನ ಚಿತ್ರೀಕರಣವೂ ಮುಗಿದಿದೆ. ಸ್ವಾತಂತ್ರ್ಯ ದಿನದ ವಿಶೇಷವಾಗಿ ಈ ಎಪಿಸೋಡ್ ಪ್ರಸಾರವಾಗಲಿದೆ. ಡಿಕೆಶಿ ಮತ್ತು ಸಿಹಿ ಕಹಿ ಚಂದ್ರು ನಡುವೆ ಸ್ನೇಹ ಸಂಬಂಧವಿದೆ. ಇದೇ ಸ್ನೇಹ ಸಂಬಂಧದ ಸಲುವಾಗಿ ಡಿಕೆಶಿ ಅಡುಗೆ ಶೋನಲ್ಲಿ ಭಾಗಿಯಾಗಿದ್ದಾರೆ. ಈ ಮೊದಲು ಜೀ ಕನ್ನಡ ವಾಹಿನಿಯ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ತಮ್ಮ ಜೀವನ ಕತೆ ಹೇಳಿದ್ದ ಡಿಕೆಶಿ ಈಗ ತಮ್ಮ ಇಷ್ಟದ ಅಡುಗೆ ಬಗ್ಗೆ ವೀಕ್ಷಕರ ಜೊತೆ ಹಂಚಿಕೊಳ್ಳಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ