ಬಜೆಟ್ : ಡಿಕೆ ಶಿವಕುಮಾರ್ ಕನಸಿಗೆ ನೀರೆರಚಿದ ಸಿಎಂ

ಶನಿವಾರ, 8 ಜುಲೈ 2023 (08:28 IST)
ಬೆಂಗಳೂರು : ನಗರದಲ್ಲಿ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಟನಲ್ ನಿರ್ಮಾಣ ಮಾಡೋ ಕನಸು ಕಂಡಿದ್ರು. ಆದರೆ ಬಜೆಟ್ ನಲ್ಲಿ ಟನಲ್ ಬಗ್ಗೆ ಪ್ರಸ್ತಾವೇ ಇಲ್ಲ. ಈ ಮೂಲಕ ಸಿದ್ದರಾಮಯ್ಯ ಅವು ಡಿಕೆ ಶಿವಕುಮಾರ್ ಕನಸಿಗೆ ನೀರೆರಚಿದ್ದಾರೆ.

ಹೌದು. ಬ್ರಾಂಡ್ ಬೆಂಗಳೂರು ನಿರ್ಮಾಣಕ್ಕೆ ಕಾಂಗ್ರೆಸ್ ಸರ್ಕಾರ ನಾನಾ ಯೋಜನೆಗಳನ್ನ ಹಾಕಿಕೊಳ್ತಾ ಇದೆ. ಅದರಲ್ಲೂ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಹಲವಾರು ಯೋಜನೆಗಳನ್ನ ಹಾಕಿಕೊಳ್ಳುತ್ತಿದ್ದಾರೆ.

ಕಸದ ಸಮಸ್ಯೆ ನಿವಾರಣೆ, ರಸ್ತೆ ಗುಂಡಿ ನಿವಾರಣೆ ಮತ್ತು ಟ್ರಾಫಿಕ್ ಸಮಸ್ಯೆ ನಿವಾರಣೆ ಹಲವು ಯೋಜನೆ ಹಾಕಿಕೊಂಡಿದ್ದಾರೆ. ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಬೆಂಗಳೂರಿನಲ್ಲಿ ಟನಲ್ ರಸ್ತೆ ನಿರ್ಮಾಣಕ್ಕೆ ಡಿಕೆ ಶಿವಕುಮಾರ್ ಪ್ಲ್ಯಾನ್ ಮಾಡಿದ್ರು. ಆದರೆ ಬಜೆಟ್ನಲ್ಲಿ ಟನಲ್ ನಿರ್ಮಾಣದ ಪ್ರಸ್ತಾವೇ ಇಲ್ಲ. 50 ಕಿಮೀ ಉದ್ದದ ಸುರಂಗ ನಿರ್ಮಾಣಕ್ಕೆ ಎರಡು ಹಂತದಲ್ಲಿ ನಿರ್ಮಾಣ ಮಾಡೋ ಪ್ಲ್ಯಾನ್ ಮಾಡಿದ್ರು. 22 ಸಾವಿರ ಕೋಟಿ ವೆಚ್ಚ ಆಗ್ತಿತ್ತು. ಆದರೆ ಟನಲ್ ಪ್ಲ್ಯಾನ್ ಬಿಟ್ಟು ವೈಟ್ ಟಾಪಿಂಗ್ ಮೊರೆ ಹೋಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ