ಕೆಸಿಸಿ 2 ಗೆ ಆಗಮಿಸಿದ ಕ್ರಿಕೆಟ್ ದಿಗ್ಗಜರು ಯಾರ ಪರವಾಗಿ ಆಡಲಿದ್ದಾರೆ ಗೊತ್ತೇ?

ಸೋಮವಾರ, 23 ಜುಲೈ 2018 (14:31 IST)
ಬೆಂಗಳೂರು : ಕಿಚ್ಚ ಸುದೀಪ್  ನೇತೃತ್ವದಲ್ಲಿ ನಡೆಯುತ್ತಿರುವ ಕರ್ನಾಟಕ ಚಲನಚಿತ್ರ ಕಪ್ (ಕೆಸಿಸಿ) ಮೊದಲನೇ ಬಾರಿ ಮಾಧ್ಯಮ ಹಾಗೂ ಸಿನಿಮಂದಿ ಜೊತೆ ನಡೆದಿತ್ತು. ಆದರೆ ಈ ಬಾರಿ ಇದರಲ್ಲಿ ಇಂಟರ್ ​ನ್ಯಾಷನಲ್​ ಆಟಗಾರರು ಕೂಡ ಭಾಗಿಯಾಗಿರುವ ವಿಷಯ ಈಗಾಗಲೇ ಎಲ್ಲರಿಗೂ ತಿಳಿದೆ ಇದೆ. ಹಾಗೇ ಈ ಸೆಲೆಬ್ರಿಟಿಗಳು  ಯಾರ ಪರ ಆಡ್ತಾರೆ ಅನ್ನೋ ಮಾಹಿತಿ ಇಲ್ಲಿದೆ ನೋಡಿ.


ಇಂಟರ್ ನ್ಯಾಷನಲ್ ಆಟಗಾರರಾದ ವಿರೇಂದ್ರ ಸೆಹ್ವಾಗ್ ಕದಂಬ ಲಯನ್ಸ್ ನಲ್ಲಿ ಆಟವಾಡಿದ್ರೆ, ಹರ್ಷೆಲ್​ ಗಿಬ್ಸ್ ಹೊಯ್ಸಳ ಈಗಲ್ಸ್ ತಂಡದಲ್ಲಿರ್ತಾರೆ. ತಿಲಕರತ್ನೆ ದಿಲ್ಸ್ಯಾನ್ ಒಡೆಯರ್ ಚಾರ್ಜರ್ಸ್ ಹಾಗೂ ಲ್ಯಾನ್ಸ್​ ಕ್ಲೂಸ್ನರ್ ಗಂಗಾ ವಾರಿಯರ್ಸ್ ನಲ್ಲಿದ್ದಾರೆ. ಇನ್ನು ಓವೈ ಷಾ ರಾಷ್ಟ್ರಕೂಟ ಪ್ಯಾಂಥರ್ಸ್ ಹಾಗೂ ಆಯಡಂ ಗಿಲ್​ಕ್ರಿಸ್ಟ್ ವಿಜಯನಗರ ಪೇಟ್ರಿಯಟ್ಸ್ ತಂಡದಲ್ಲಿದ್ದಾರೆ.


ಇನ್ನು ಸಿನಿಮಾ ನಟರಾದ ಸೆಂಚುರಿ ಸ್ಟಾರ್ ಶಿವರಾಜ್​ ಕುಮಾರ್​ ವಿಜಯನಗರ ಪೇಟ್ರಿಯಟ್ಸ್, ಪುನೀತ್ ರಾಜಕುಮಾರ್ ಗಂಗಾ ವಾರಿಯರ್ಸ್, ಸುದೀಪ್ ಕದಂಬ ಲಯನ್ಸ್, ಯಶ್ ರಾಷ್ಟ್ರಕೂಟ ಪ್ಯಾಂಥರ್ಸ್, ಉಪೇಂದ್ರ ಹೊಯ್ಸಳ ಈಗಲ್ಸ್, ಹಾಗೂ ಗಣೇಶ್ ಒಡೆಯರ್ ಚಾರ್ಜರ್ಸ್ ತಂಡದಲ್ಲಿದ್ದಾರೆ.


ಈ ಬಾರಿಯ ಕೆಸಿಸಿ ಉದ್ಘಾಟನಾ ಸಮಾರಂಭದಲ್ಲಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್​, ಅಂಬರೀಶ್​, ಜನಾರ್ಧನ ರೆಡ್ಡಿ, ಸುಮಲತಾ, ಶಿವರಾಜ್​ಕುಮಾರ್​, ಉಪೇಂದ್ರ, ಗಣೇಶ್​, ರಾಕ್​ಲೈನ್ ವೆಂಕಟೇಶ್​, ಶೃತಿ ಹಾಸನ್​ ಮತ್ತು ಮಾನ್ವಿತಾ ಹಾಜರಿದ್ದರು. ಕೆಸಿಸಿ ಟೂರ್ನಮೆಂಟ್​ ಸೆಪ್ಟೆಂಬರ್​ 8 ಮತ್ತು 9ರಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ