ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ನೋ ಟೆನ್ಷನ್ ಎಂದರಾ ವಿಜಯಲಕ್ಷ್ಮಿ ದರ್ಶನ್

Krishnaveni K

ಗುರುವಾರ, 24 ಜುಲೈ 2025 (18:20 IST)
ಬೆಂಗಳೂರು: ಒಂದೆಡೆ ಸುಪ್ರೀಂಕೋರ್ಟ್ ನಲ್ಲಿ ದರ್ಶನ್ ಮತ್ತು ಪ್ರಮುಖ ಆರೋಪಿಗಳಿಗೆ ಬೇಲ್ ನೀಡಿರುವುದನ್ನು ಪ್ರಶ್ನಿಸಿ ಪೊಲೀಸರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಯುತ್ತಿದ್ದರೆ ಇತ್ತ ವಿಜಯಲಕ್ಷ್ಮಿ ದರ್ಶನ್ ಕೂಲ್ ಆಗಿ ಸೋಷಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಹಾಕಿದ್ದಾರೆ.

ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ದರ್ಶನ್ ಮತ್ತು ಇತರೆ ಆರೋಪಿಗಳಿಗೆ ನೀಡಲಾಗಿದ್ದ ಬೇಲ್ ಪ್ರಶ್ನಿಸಿ ಪೊಲೀಸರು ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ಪ್ರಕರಣ ವಾದ-ವಿವಾದ ಇಂದಿಗೆ ಮುಕ್ತಾಯವಾಗಿದ್ದು ತೀರ್ಪು ಕಾಯ್ದಿರಿಸಿದೆ.

ಇಂದೇ ತೀರ್ಪು ಬರಬಹುದೇನೋ ಎಂಬ ನಿರೀಕ್ಷೆಯಿತ್ತು. ಸುಪ್ರೀಂಕೋರ್ಟ್ ನಲ್ಲಿ ಇಂದು ಮಹತ್ವದ ವಿಚಾರಣೆ ನಡೆಯುತ್ತಿದ್ದರೆ ದರ್ಶನ್ ಮಾತ್ರ ಡೆವಿಲ್ ಶೂಟಿಂಗ್ ಗೆಂದು ಥೈಲ್ಯಾಂಡ್ ನಲ್ಲಿದ್ದಾರೆ. ಅವರ ಜೊತೆಗೆ ವಿಜಯಲಕ್ಷ್ಮಿ ದರ್ಶನ್ ಕೂಡಾ ಇದ್ದಾರೆ ಎನ್ನಲಾಗಿದೆ.

ವಿಜಯಲಕ್ಷ್ಮಿ ತಮ್ಮ ಇನ್ ಸ್ಟಾಗ್ರಾಂನಲ್ಲಿ ಇಂದು ಸ್ಟಿಕಿ ಮ್ಯಾಂಗೋ ರೈಸ್ ಸವಿಯುತ್ತಿರುವುದಾಗಿ ಫೋಟೋ ಪ್ರಕಟಿಸಿದ್ದಾರೆ. ಇದನ್ನು ನೋಡಿದರೆ ಸುಪ್ರೀಂಕೋರ್ಟ್ ವಿಚಾರಣೆ ಬಗ್ಗೆ ತಾವು ಟೆನ್ಷನ್ ಆಗಿಲ್ಲ ಎಂದು ಸೂಚ್ಯವಾಗಿ ಹೇಳಿದಂತಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ