ಡಬ್ಬಿಂಗ್ ಗೆ ಬೆಂಬಲ ನೀಡಿದ ರಾಜಕೀಯ ಗಣ್ಯರು

ಭಾನುವಾರ, 22 ಜುಲೈ 2018 (12:27 IST)
ಬೆಂಗಳೂರು : ಕನ್ನಡದಲ್ಲಿ ಡಬ್ಬಿಂಗ್ ಬೇಕು, ಬೇಡ ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಇದೀಗ ಈ ವಿಚಾರಕ್ಕೆ ರಾಜಕೀಯ ಗಣ್ಯರು ಬೆಂಬಲ ಸೂಚಿಸಿದ್ದಾರೆ.


ಅಕ್ಟೋಬರ್ ತಿಂಗಳಲ್ಲಿ ಹಾಲಿವುಡ್ ಸಿನಿಮಾ 'ಮೋಗ್ಲಿ' ವಿಶ್ವದಾದ್ಯಂತ ಬಿಡುಗಡೆ ಆಗಲಿದೆ. 'ಮೋಗ್ಲಿ' ಚಿತ್ರವನ್ನ ಕನ್ನಡ ಭಾಷೆಯಲ್ಲಿ ನೋಡಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಶುರುವಾಗಿದೆ. ಇದಕ್ಕೆ ಬೆಂಬಲ ನೀಡುವಂತೆ ರಾಜಕೀಯ ಗಣ್ಯರು ಕೂಡ ಡಬ್ಬಿಂಗ್ ಬರಲಿ ಎನ್ನುವ ಅಭಿಪ್ರಾಯವನ್ನು ತಿಳಿಸಿದ್ದಾರೆ.


ಈ ಬಗ್ಗೆ ಮಾತನಾಡಿದ ಶಾಸಕ ಸಿ ಟಿ ರವಿ,’ ಪ್ರೇಕ್ಷಕರಿಗೆ ಇಷ್ಟವಾಗುವುದನ್ನು ತಮ್ಮ ಭಾಷೆಯಲ್ಲಿಯೇ ನೋಡಲಿ, ನನಗೂ ಬೇರೆ ಭಾಷೆಯ ಸಿನಿಮಾಗಳನ್ನು ನನ್ನ ಭಾಷೆಯಲ್ಲಿ ನೋಡುವ ಆಸೆ ಇದೆ’ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಹಾಗೇ ಸಂಸದ ಪ್ರಹ್ಲಾದ್ ಜೋಶಿ ಕೂಡ ಡಬ್ಬಿಂಗ್ ಪರವಾಗಿ ಟ್ವೀಟ್ ಮಾಡಿದ್ದು ‘ಅಂತರಾಷ್ಟ್ರೀಯಮಟ್ಟದ ಸಿನಿಮಾಗಳು ಧಾರಾವಾಹಿಗಳು ಮತ್ತು ಕಾರ್ಯಕ್ರಮಗಳು ಕನ್ನಡದಲ್ಲಿ ಡಬ್ ಆಗಲಿ, ಅವುಗಳನ್ನು ಕನ್ನಡದಲ್ಲೇ ನೋಡಲು ಪ್ರೇಕ್ಷಕರು ಬಯಸುತ್ತಾರೆ’ ಎಂದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ