ಪ್ರಭಾಸ್ ಪ್ರಸ್ತುತ ನಟಿಸುತ್ತಿರುವ ಈ ನಾಲ್ಕು ಚಿತ್ರದ ಬಜೆಟ್ ಎಷ್ಟು ಗೊತ್ತಾ?

ಮಂಗಳವಾರ, 8 ಡಿಸೆಂಬರ್ 2020 (12:32 IST)
ಹೈದರಾಬಾದ್ : ನಟ ಪ್ರಭಾಸ್ ಟಾಲಿವುಡ್ ನ ಖ್ಯಾತ ನಟರಲ್ಲಿ ಒಬ್ಬರು. ಅವರು ಟಾಲಿವುಡ್ ಚಿತ್ರರಂಗಕ್ಕೆ ಸೂಪರ್ ಹಿಟ್ ಚಿತ್ರಗಳನ್ನು ನೀಡುವುದರ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಪ್ರಸ್ತುತ ಅವರು ನಾಲ್ಕು ಚಿತ್ರಗಳಲ್ಲಿ ನಟಿಸುತ್ತಿದ್ದು, ಈ ಚಿತ್ರದ ಬಜೆಟ್ ಎಷ್ಟೆಂದು ತಿಳಿದರೆ ಶಾಕ್ ಆಗ್ತೀರಾ.

ಹೌದು. ಬಾಹುಬಲಿ ಚಿತ್ರದ ಮೂಲಕ ಜನರಿಗೆ ಚಿರಪರಿಚಿತರಾದ ನಟ ಪ್ರಭಾಸ್ ಅವರು ಪ್ರಸ್ತುತ ರಾಧಾ ಕೃಷ್ಣ ನಿರ್ದೇಶಿಸುತ್ತಿರುವ ‘ರಾಧೆ ಶ್ಯಾಮ್’ ನಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ನಿರ್ದೇಶಕ ನಾಗ ಅಶ್ವಿನ್ ನಿರ್ದೇಶನದ ‘ಮಹಾನದಿ’ ಚಿತ್ರದಲ್ಲಿ ನಟಿಸಲು ಸಿದ್ದರಾಗಿದ್ದಾರೆ.

ಹಾಗೇ ನಿರ್ದೇಶಕ ಓಂರಾವತ್ ನಿರ್ದೇಶನದ ‘ಆದಿಪುರುಷ’ ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಅದರ ಜೊತೆಗೆ ಪ್ರಶಾಂತ್ ನೀಲ್ ನಿರ್ದೇಶಿಸಲಿರುವ ಚಿತ್ರದಲ್ಲಿಯೂ ಪ್ರಭಾಸ್ ನಟಿಸಲಿದ್ದು, ಅದರ ಫಸ್ಟ್ ಲುಕ್ ಇತ್ತೀಚೆಗೆ ಸಲಾರ್ ಶೀರ್ಷಿಕೆಯಡಿ ಬಿಡುಗಡೆಯಾಗಿದೆ. ಈ ನಾಲ್ಕು ಚಿತ್ರಗಳ ಬಜೆಟ್ ಸುಮಾರು 1000 ಕೋಟಿ ರೂ. ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ