ಅನುಶ್ರೀ ಗಂಡ ನಿಜಕ್ಕೂ ಕೋಟ್ಯಾಧಿಪತಿನಾ, ಮದುವೆ ಬಳಿಕ ಬಯಲಾಯ್ತು ಸತ್ಯ

Krishnaveni K

ಗುರುವಾರ, 28 ಆಗಸ್ಟ್ 2025 (15:08 IST)
Photo Credit: Instagram
ಬೆಂಗಳೂರು: ಆಂಕರ್ ಅನುಶ್ರೀ ಇಂದು ಗೆಳೆಯ ರೋಷನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ಬಳಿಕ ಅನುಶ್ರೀ ಗಂಡ ನಿಜಕ್ಕೂ ಕೋಟ್ಯಾಧಿಪತಿನಾ, ಮದುವೆ ಬಳಿಕ ಸತ್ಯ ಬಯಲಾಗಿದೆ.

ಇಂದು ಬೆಂಗಳೂರಿನ ಖಾಸಗಿ ರೆಸಾರ್ಟ್ ಒಂದರಲ್ಲಿ ಅನುಶ್ರೀ ಶಾಸ್ತ್ರೋಸ್ತ್ರಕವಾಗಿ ಕುಟುಂಬದವರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ಇಷ್ಟು ದಿನವೂ ಅವರ ಮದುವೆ ಬಗ್ಗೆ, ಮದುವೆಯಾಗಲಿರುವ ಹುಡುಗನ ಬಗ್ಗೆ ಒಂದಲ್ಲಾ ಒಂದು ಗಾಸಿಪ್ ಕೇಳಿಬರುತ್ತಲೇ ಇತ್ತು.

ಅನುಶ್ರೀ ಗಂಡ ಕೋಟ್ಯಾಧಿಪತಿ, ಉದ್ಯಮಿ, 300 ಕೋಟಿ ಒಡೆಯ ಎಂದೆಲ್ಲಾ ಸುದ್ದಿಗಳಿತ್ತು. ಈ ಬಗ್ಗೆ ಇಂದು ಮದುವೆ ಬಳಿಕ ಮಾಧ್ಯಮಗಳ ಮುಂದೆ ಅನುಶ್ರೀ ಮತ್ತು ರೋಷನ್ ಸ್ಪಷ್ಟನೆ ಕೊಟ್ಟಿದ್ದಾರೆ.

ನೀವು 300 ಕೋಟಿ ಒಡೆಯ ಅಂತೆ, ಉದ್ಯಮಿಯಂತೆ ಎಂದೆಲ್ಲಾ ಸುದ್ದಿಗಳಿವೆ. ನಿಜಕ್ಕೂ ನೀವು ಏನು ಮಾಡಿಕೊಂಡಿದ್ದೀರಿ ಎಂದು ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಅವರು ‘ನಾನು ಐಟಿ ಕಂಪನಿ ಉದ್ಯೋಗಿ. ಉದ್ಯಮಿ, 300 ಕೋಟಿ ಒಡೆಯ ಅನ್ನೋದೆಲ್ಲಾ ನಿಜ ಅಲ್ಲ’ ಎಂದಿದ್ದಾರೆ. ಇದಕ್ಕೆ ಅನುಶ್ರೀ ಕೂಡಾ ಧ್ವನಿಗೂಡಿಸಿದ್ದು ‘ಅವನು ಹೃದಯದಿಂದ ಕೋಟ್ಯಾಧಿಪತಿ. ಮುಂದೆ 300 ಕೋಟಿ ಒಡೆಯ ಆಗಲಿ’ ಎಂದು ಗಂಡನ ಕಾಲೆಳೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ