ಹೇಗೆ ರೆಡಿ ಆಯಿತು ಗೊತ್ತಾ ಕಿಚ್ಚ ಸುದೀಪ್ ಗ್ರ್ಯಾಂಡ್ ಫಿನಾಲೆ ಹಾಕಿಕೊಂಡಿದ್ದ ಕಾಸ್ಟ್ಯೂಮ್

Sampriya

ಭಾನುವಾರ, 26 ಜನವರಿ 2025 (11:36 IST)
photo Courtesy Instagram
ಬಿಗ್‌ಬಾಸ್ ಸೀಸನ್ 11ರ ಗ್ರ್ಯಾಂಡ್ ಫಿನಾಲೆ ನಿನ್ನೆ ಆರಂಭಗೊಂಡಿದ್ದು, ಕಿಚ್ಚ ಸುದೀಪ್ ಅವರು ಖಡಕ್‌ ಆಗಿ ಎಂಟ್ರಿಕೊಟ್ಟಿದ್ದಾರೆ. ಮಾಕ್ಸ್ ಸಿನಿಮಾದ ಹಾಡಿಗೆ ಹೆಜ್ಜೆ ಹಾಕುತ್ತಾ ಬಂದ ಸುದೀಪ್‌ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ಯಾವಾಗಲೂ ತಮ್ಮ ಸ್ಟೈಲಿಶ್‌ ಲುಕ್‌ನಿಂದಲೇ ಬಿಗ್‌ಬಾಸ್ ವೇದಿಕೆಯ ಕಾಣಿಸಿಕೊಳ್ಳುವ ಕಿಚ್ಚ ಅವರ ಗ್ರ್ಯಾಂಡ್ ಫಿನಾಲೆಯ ಕಾಸ್ಟ್ಯೂಮ್‌ ಎಲ್ಲರ ಗಮನ ಸೆಳೆದಿದೆ. ಇದನ್ನು ನೋಡಿದ ಅವರ ಅಭಿಮಾನಿಗಳು ನಮ್ಮ ಕಿಚ್ಚ ಬಾಸ್ ಯಾವಾಗಲೂ ಸೂಪರ್ ಆಗಿ ಕಾಣುತ್ತಾರೆ ಎಂದಿದ್ದಾರೆ.

ಇದೀಗ ಸಾಮಾಜಿಕ ಜಾಲತಾಣದಲ್ಲಿ ಕಿಚ್ಚ ಸುದೀಪ್ ಅವರು ಗ್ರ್ಯಾಂಡ್‌ ಫಿನಾಲೆಗೆ ಹಾಕಿಕೊಂಡಿದ್ದ ಕಾಸ್ಟ್ಯೂಮ್‌ ರೆಡಿ ಆದ ವಿಡಿಯೋ ಇನ್‌ಸ್ಟಾಗ್ರಾಂನಲ್ಲಿ ಶೇರ್ ಆಗುತ್ತಿದೆ.  ಬರೋಬ್ಬರಿ 5-6 ಜನರಿಂದ ತಂಡ ಈ ಕಾಸ್ಟ್ಯೂಮ್‌ ಅನ್ನು ರೆಡಿ ಮಾಡಿದೆ. ಬಟರ್‌ಫ್ಲೈ ಥೀಂನಲ್ಲಿ ಕಲರ್‌ಫುಲ್ ಆಗಿ ಕಾಸ್ಟ್ಯೂಮ್ ರೆಡಿ ಆಗಿದೆ.






ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ