ಪದ್ಮಭೂಷಣ ಪ್ರಶಸ್ತಿಗೆ ಭಾಜನರಾದ ಅನಂತ್‌ನಾಗ್‌, ಕೊನೆಗೂ ಈಡೇರಿತು ಕನ್ನಡಿಗರ ಕನಸು

Sampriya

ಭಾನುವಾರ, 26 ಜನವರಿ 2025 (11:03 IST)
Photo Courtesy X
ಬೆಂಗಳೂರು:  ಕಲಾ ಕ್ಷೇತ್ರಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದ ಕನ್ನಡ ಹಿರಿಯ ನಟ ಅನಂತ್‌ನಾನ್‌ಗೆ ದೇಶದ ಪ್ರತಿಷ್ಠಿತ ಪ್ರಶಸ್ತಿ ಆಗಿರುವ ಪದ್ಮಭೂಷಣ ಲಭಿಸಿದೆ.

ಅನಂತ್ ನಾಗ್ ಸುಮಾರು ಐದು ದಶಕದಿಂದ ಭಾರತೀಯ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಸುಮಾರು 300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಅನಂತ್ ನಾಗ್‌ ಅವರ ನೈಜ ಅಭಿನಯಕ್ಕೆ ಅಸಂಖ್ಯಾತ ಅಭಿಮಾನಿಗಳು ಇದ್ದಾರೆ. ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ, ಹಿಂದಿ, ಮರಾಠಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ.

ಕನ್ನಡ ಸಿನಿಮಾಗಳಲ್ಲಿ ಸುದೀರ್ಘವಾಗಿ ಅಭಿನಯಿಸಿದ್ದ ಅನಂತ್‌ನಾಗ್‌ ಅವರಿಗೆ ಪದ್ಮ ಪ್ರಶಸ್ತಿಯನ್ನು ನೀಡಬೇಕೆಂದು ಕನ್ನಡಿಗರು ಅಭಿಯಾನವನ್ನು ಶುರುಮಾಡಿದ್ದರು. ಕಳೆದ ವರ್ಷ ಅನಂತ್‌ನಾಗ್ ಅವರಿಗೆ ಪದ್ಮ ಪ್ರಶಸ್ತಿಯನ್ನು ನೀಡಬೇಕು ಕನ್ನಡದ ನಟರಾದ ರಕ್ಷಿತ್ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ಅವರಿಂದ ಇಂತಹದ್ದೊಂದು ಅಭಿಯಾನ ಶುರುವಾಗಿತ್ತು. ಇದಕ್ಕೆ ಕನ್ನಡಿಗರು ಧ್ವನಿಗೂಡಿಸಿದ್ದರು. ಇವರ ಜತೆ ಅನೇಕ ನಟ ನಟಿಯರು ಕೂಡಾ ಬೆಂಬಲ ಸೂಚಿಸಿದ್ದರು. ಅದರಲ್ಲಿ ಒಬ್ಬರು ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅವರು.

ಕಳೆದ ಕೆಲ ವರ್ಷಗಳಿಂದ ಅನಂತ್‌ ನಾಗ್ ಅವರಿಗೆ ಪದ್ಮ ಪ್ರಶಸ್ತಿಯನ್ನು ನೀಡದಿರುವುದು ಕನ್ನಡ ಸಿನಿಮಾ ರಂಗದವರಿಗೆ ಹಾಗೂ ಕನ್ನಡಿಗರಿಗೆ ಬೇಸರವನ್ನು ಉಂಟುಮಾಡಿತ್ತು. ಈ ಸಂಬಂಧ ಅಭಿಯಾನ ಶುರು ಮಾಡದಂತೆ ಅನಂತ್ ನಾಗ್ ಅವರೇ ಕೇಳಿಕೊಂಡಿದ್ದರು. ಇದೀಗ ಅನಂತ್‌ ನಾಗ್ ಅವರಿಗೆ ಪ್ರಶಸ್ತಿ ಸಿಕ್ಕಿರುವುದು ಕನ್ನಡಿಗರಿಗೆ ಸಂತಸವನ್ನು ತಂದುಕೊಟ್ಟಿದೆ.

ಇದೀಗ ಸಾಮಾಜಿಕ ಜಾಲತಾಣದಲ್ಲಿ 2021ರಲ್ಲಿ ಪುನೀತ್ ರಾಜ್‌ಕುಮಾರ್ ಅವರು ಮಾಡಿದ ಟ್ವೀಟ್ ವೈರಲ್ ಆಗುತ್ತಿದೆ. ಪುನೀತ್ ಅಭಿಮಾನಿಗಳು ಹಳೆಯ ಟ್ವೀಟ್‌ಅನ್ನು ಮತ್ತೇ ಪೋಸ್ಟ್ ಮಾಡಿ, ಅನಂತ್ ನಾಗ್‌ ಶುಭಕೋರುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ