ಬೆಂಗಳೂರು: ಬಿಗ್ಬಾಸ್ ಸೀಸನ್ 11ರ ಗ್ರ್ಯಾಂಡ್ ಫಿನಾಲೆ ಇಂದು ಅದ್ಧೂರಿಯಾಗಿ ಸಂಜೆ 6ರಿಂದ ಪ್ರಸಾರವಾಗಲಿದೆ. ಇಂದು ಮುಂಜಾನೆಯಿಂದಲೇ ಬಿಗ್ಬಾಸ್ ಫಿನಾಲೆ ವಾರದ ಶೂಟಿಂಗ್ ನಡೆದಿದೆ. ಕಿಚ್ಚ ಸುದೀಪ್ ಅವರು ಮಾಕ್ಸ್ ಸಿನಿಮಾ ಹಾಡಿಗೆ ಹೆಜ್ಜೆ ಹಾಕುತ್ತಾ, ಗ್ಯ್ರಾಂಡ್ ಫಿನಾಲೆ ವೇದಿಕೆಗೆ ಎಂಟ್ರಿ ಕೊಟ್ಟಿದ್ದಾರೆ.
ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿದ ಪ್ರೋಮೋದಲ್ಲಿ ಕಿಚ್ಚನ ಡ್ಯಾನ್ಸ್ ಕಂಡು ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಮಾಹಿತಿ ಪ್ರಕಾರ ಸ್ಟ್ರಾಂಗ್ ಅಭ್ಯರ್ಥಿಯೇ ದೊಡ್ಮನೆಯಿಂದ ಹೊರಬಂದಿದ್ದಾರೆ ಎನ್ನಲಾಗಿದೆ.
ಫಿನಾಲೆಗೆ ತ್ರಿವಿಕ್ರಮ್, ಹನಮಂತು, ರಜತ್, ಮಂಜು, ಮೋಕ್ಷಿತಾ ಹಾಗೂ ಭವ್ಯಾ ಅವರು ಎಂಟ್ರಿಕೊಟ್ಟಿದ್ದಾರೆ. ಈ ಸ್ಪರ್ಧಿಗಳಲ್ಲಿ ಗ್ರ್ಯಾಂಡ್ ಫಿನಾಲೆಗೂ ಮೊದಲು ಒಬ್ಬ ಸ್ಪರ್ಧಿ ಎಲಿಮಿನೇಟ್ ಆಗಿದ್ದಾರೆ. ಭವ್ಯಾ ಗೌಡ ಅವರು ಅತೀ ಕಡಿಮೆ ಓಟ್ ಪಡೆದುಕೊಂಡು ಗ್ರ್ಯಾಂಡ್ ಫಿನಾಲೆಗೂ ಮೊದಲೇ ಎಲಿಮಿನೇಟ್ ಆಗಿದ್ದಾರೆ.
ಟಾಸ್ಕ್ಗಳಲ್ಲಿ ತುಂಬಾನೇ ಚೆನ್ನಾಗಿ ಆಟವಾಡಿ, ಮೂರು ಬಾರಿ ಕ್ಯಾಪ್ಟನ್ ಆಗಿದ್ದ ಭವ್ಯಾ ಅವರು ಇದೀಗ ಗ್ರ್ಯಾಂಡ್ ಫಿನಾಲೆಗೆ ಎಂಟ್ರಿ ಕೊಡುವ ಮುನ್ನವೇ ಎಲಿಮಿನೇಟ್ ಆಗಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಟ್ರೋಫಿ ಪಡೆಯುವ ಕನಸು ನುಚ್ಚು ನೂರಾಗಿದೆ. ವಿನ್ನರ್ ರೇಸ್ನಲ್ಲಿ ಇದ್ದ ಭವ್ಯಾ ಗೌಡ ಅವರು ಹೊರ ಬಂದಿದ್ದಕ್ಕಾಗಿ ಅವರು ಕುಟುಂಬಸ್ಥರು ಹಾಗೂ ಅವರ ಅಭಿಮಾನಿಗಳು ಸಿಕ್ಕಾಪಟ್ಟೆ ಬೇಸರ ವ್ಯಕ್ತಪಡಿಸಿದ್ದಾರೆ.