ರಜನಿಕಾಂತ್ ಬಗ್ಗೆ ದೀಪಿಕಾ ಪಡುಕೋಣೆ ಹೇಳಿದ್ದೇನು ಗೊತ್ತಾ?

ಸೋಮವಾರ, 20 ನವೆಂಬರ್ 2023 (11:13 IST)
ತಾನು ಯಾವಾಗ ಚೆನ್ನೈ ಗೆ ಬಂದರೂ ಆಗ ತನಗೆ ರಜನಿಕಾಂತ್ ಅವರ ಮನೆಯಿಂದ ಊಟ ಬರುತ್ತದೆ. ತಾನು ಯಾವಾಗ ಚೆನ್ನೈ ಗೆ ಬಂದರೂ ಐಶ್ವರ್ಯ ಮತ್ತು ಸೌಂದರ್ಯ ಜೊತೆ ಮಾತನಾಡುತ್ತೇನೆ ಎಂದು ಹೇಳಿದ್ದಾಳೆ. ಅವರು ನನ್ನ ಕುಟುಂಬದ ಸದಸ್ಯರಂತೆ ಆಗಿದ್ದಾರೆ ಎಂದು ಹೇಳಿದ್ದಲ್ಲದೆ, ಅವರು ಮುಂಬೈ ಗೆ ಬಂದರೆ ತನ್ನನ್ನು ಭೇಟಿ ಮಾಡದೆ ಹೋಗುವುದಿಲ್ಲ ಎಂದು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಸಂತಸ ವ್ಯಕ್ತಪಡಿಸಿದ್ದಾರೆ.
 
ಚೆನ್ನೈಗೆ ಬಂದರೆ ತನಗೆ ರಜನಿಕಾಂತ್  ಅವರ ಮನೆಯಿಂದ ಊಟ ಬರುತ್ತದೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾಳೆ ಮುದ್ದು ಹುಡುಗಿ ದೀಪಿಕ ಪಡುಕೋಣೆ. ಗೆಲುವಿನ ಕುದುರೆ ಆಗಿರುವ ದೀಪಿ ಇತ್ತೀಚಿಗೆ ತನ್ನ ಹೊಸ ಚಿತ್ರ ಪ್ರಮೋಟ್ ಮಾಡಲೆಂದು ಚೆನ್ನೈಗೆ ಬಂದಿದ್ದಳು. 
 
ಚೆನ್ನೈ ಗೆ ಬಂದ ಸಂದರ್ಭದಲ್ಲಿ ಪತ್ರಕರ್ತರು ನೀವು ಯಾಕೆ ಕೊಚ್ಚಾಡಿಯನ್ ಬಳಿಕ ತಮಿಳು ಚಿತ್ರಗಳಲ್ಲಿ ನಟಿಸಿಲ್ಲ ಎಂದು ದೀಪಿ ಬಳಿ ಕೇಳಿದರು, ಆಗ ಆಕೆ ಯಾವ ಭಾಷೆಯ ಚಿತ್ರವಾದರೂ ನಟಿಸಲು ತಾನು ಸಿದ್ಧ ಹಾಗೂ ಹೀರೋ ಬಗ್ಗೆ ಹೆಚ್ಚು ಆದ್ಯತೆ ನೀಡಲ್ಲ ಎಂದು ಹೇಳಿದ್ದಲ್ಲದೆ, ತನ್ನ ಪಾತ್ರಕ್ಕೆ ಪ್ರಾಮುಖ್ಯತೆ ಇದೆಯೇ ಎನ್ನುವ ಸಂಗತಿಗೆ ಹೆಚ್ಚು ಗಮನ ನೀಡುತ್ತೇನೆ. ರಜನಿಕಾಂತ್ ಅವರ ಜೊತೆ ಕೊಚ್ಚಾಡಿಯನ್ ಅಭಿನಯ ಚೆನ್ನಾಗಿತ್ತು ಎಂದು ಈ ಸಂದರ್ಭದಲ್ಲಿ ಹೇಳಿದ್ದಾಳೆ.
 
ಅದೇ ರೀತಿ ನಿರ್ದೇಶಕ ಮಣಿರತ್ನಂ ಅವರ ಜೊತೆ ಕೆಲಸ ಮಾಡುವ ಆಸೆ ಇದೆ, ಈ ಮೊದಲು ಅವರ ನಿರ್ದೇಶನದ ಚಿತ್ರದಲ್ಲಿ ನಟಿಸುವ ಅವಕಾಶ ದೊರೆತಿದ್ದರು, ತಾನು ಅನಿವಾರ್ಯ ಕಾರಣಗಳಿಂದ ನಟಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾಳೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ