ಖ್ಯಾತ ನಟ ನಾಗರ್ಜುನ 'ಕಲ್ಕಿ 2898ಎಡಿ' ನೋಡಿ ಮಾಡಿದ್ದೇನು ಗೊತ್ತಾ

Sampriya

ಶನಿವಾರ, 29 ಜೂನ್ 2024 (16:20 IST)
Photo Courtesy X
ಮುಂಬೈ: ಎಲ್ಲ ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿರುವ 'ಕಲ್ಕಿ 2898ಎಡಿ' ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ಅವರ ನಟನೆಗೆ ಖ್ಯಾತ ಹಿರಿಯ ನಟ ನಾಗಾರ್ಜುನ ಅವರು ಫಿದಾ ಆಗಿದ್ದಾರೆ.

ಅಮಿತಾಭ್ ಬಚ್ಚನ್, ಕಮಲ್ ಹಾಸನ್, ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ನಟಿಸಿರುವ ನಾಗ್ ಅಶ್ವಿನ್ ಅವರ ಕಲ್ಕಿ 2898 AD ಸಿನಿಮಾ ನೋಡಿದ ಮಂದಿ ಭಾರತೀಯ ಚಿತ್ರರಂಗದಲ್ಲಿ ಈ ರೀತಿಯ ಚಿತ್ರ ಬಂದಿಲ್ಲ ಎಂದು ಮೆಚ್ಚುಗೆಯ ಮಾತನ್ನು ಆಡುತ್ತಿದ್ದಾರೆ. ಇನ್ನೂ ಬಿಡುಗಡೆಯಾದ ಮೂರೇ ದಿನಕ್ಕೆ ಸಿನಿಮಾದ 298.5 ಕೋಟಿ ಕಲೆಕ್ಷನ್ ಹಿಸ್ಟರಿ ಕ್ರಿಯೇಟ್ ಮಾಡಿದೆ.

ಇನ್ನೂ ಸಿನಿಮಾ ವೀಕ್ಷಿಸಿದ ಖ್ಯಾತ ನಟ ನಾಗರ್ಜುನ ಅವರು ಚಿತ್ರ ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು.
    ಸೂಪರ್ ಡ್ಯೂಪರ್ ಕಲ್ಕಿ 2898 ಎಡಿ ತಂಡಕ್ಕೆ ತಂಡಕ್ಕೆ ಅಭಿನಂದನೆಗಳು!!
    ನಾಗಿ ನೀವು ನಮ್ಮನ್ನು ಬೇರೆ ಸಮಯಕ್ಕೆ ಮತ್ತು ಇನ್ನೊಂದು ಸ್ಥಳಕ್ಕೆ ಕರೆದೊಯ್ದಿದ್ದೀರಿ. ಪುರಾಣ ಮತ್ತು ಇತಿಹಾಸದೊಂದಿಗೆ ಕಾಲ್ಪನಿಕ ಕಥೆಯನ್ನು ತುಂಬಾ ಸಲೀಸಾಗಿ ಹೆಣೆದುಕೊಂಡಿದೆ!!
ಮೂಲ ಮಾಸ್ ಹೀರೋ ಆಗಿರುವ ಅಮಿತಾಬ್ ಬಚ್ಚನ್ ಅವರ ಅಭಿನಯ ಬೆಂಕಿಯತ್ತಿದೆ. ಇನ್ನೂ ಕಮಲ್ ಹಾಸನ್ ಅವರನ್ನು ಸೀಕ್ವೆಲ್‌ನಲ್ಲಿ ನೋಡಲು ಕಾಯುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ