ಆಸ್ಪತ್ರೆಯ ತುರ್ತು ವಿಭಾಗದಲ್ಲಿ ಶೂಟಿಂಗ್: ನಟ ಫಹದ್ ಫಾಜಿಲ್ ವಿರುದ್ಧ ದೂರು

Sampriya

ಶನಿವಾರ, 29 ಜೂನ್ 2024 (14:22 IST)
Photo Courtesy X
ಕೇರಳ: ಮಲಯಾಳಂ ಖ್ಯಾತ ನಟ ಫಹದ್ ಫಾಜಿಲ್ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಪೇಯ್ನ್‌ಕಿಲಿ ಚಿತ್ರೀಕರಣ ಕೇರಳದ ಆಸ್ಪತ್ರೆಯಲ್ಲಿ ನಡೆದಿತ್ತು.

ಎರ್ನಾಕುಲಂನ ಅಂಗಮಾಲಿ ತಾಲೂಕು ಆಸ್ಪತ್ರೆಯ ತುರ್ತು ವಿಭಾಗದಲ್ಲಿ ಮಲಯಾಳಂ ಸಿನಿಮಾವೊಂದರ ಚಿತ್ರೀಕರಣ ನಡೆಯುತ್ತಿದ್ದು, ರೋಗಿಗಳಿಗೆ ತೊಂದರೆಯಾಗಿದೆ ಎಂಬ ವರದಿಗಳು ಬಂದ ಹಿನ್ನೆಲೆಯಲ್ಲಿ ಕೇರಳ ರಾಜ್ಯ ಮಾನವ ಹಕ್ಕುಗಳ ಆಯೋಗ ಶುಕ್ರವಾರ ನಟ ಫಹದ್ ಫಾಜಿಲ್ ವಿರುದ್ಧ ದೂರು ದಾಖಲಿಸಿಕೊಂಡಿದೆ.

ಮಾಧ್ಯಮ ವರದಿಗಳ ಆಧಾರದ ಮೇಲೆ ಸ್ವಯಂ ಪ್ರಕರಣವನ್ನು ದಾಖಲಿಸಿಕೊಂಡ ಆಯೋಗದ ಸದಸ್ಯೆ ವಿ ಕೆ ಬೀನಾಕುಮಾರಿ, ಏಳು ದಿನಗಳಲ್ಲಿ ವಿವರಣೆ ವರದಿಯನ್ನು ಸಲ್ಲಿಸುವಂತೆ ಎರ್ನಾಕುಲಂ ಜಿಲ್ಲಾ ವೈದ್ಯಾಧಿಕಾರಿ ಮತ್ತು ಅಂಗಮಾಲಿ ತಾಲೂಕು ಆಸ್ಪತ್ರೆ ಅಧೀಕ್ಷಕರಿಗೆ ಸೂಚಿಸಿದರು.

ಚಿತ್ರೀಕರಣದ ವೇಳೆ ನಟರು ಸೇರಿದಂತೆ ಸುಮಾರು 50 ಮಂದಿ ಹಾಜರಿದ್ದು, ತುರ್ತು ಕೋಣೆಯಲ್ಲಿ ಚಿತ್ರತಂಡ ದೀಪಗಳನ್ನು ಮಂದಗೊಳಿಸಿದೆ ಮತ್ತು ನಿರ್ಬಂಧಗಳನ್ನು ವಿಧಿಸಿದೆ ಎಂದು ಆಯೋಗವು ಹೇಳಿಕೆಯಲ್ಲಿ ತಿಳಿಸಿದೆ.

ವೈದ್ಯರು ಚಿಕಿತ್ಸೆ ಮುಂದುವರೆಸಿರುವಾಗಲೇ ಚಿತ್ರದ ಶೂಟಿಂಗ್ ನಡೆದಿದೆ ಎಂದು ತಿಳಿದುಬಂದಿದೆ. ಪೇಯ್ನ್‌ಕಿಲಿ ಎಂಬ ಶೀರ್ಷಿಕೆಯ ಈ ಚಿತ್ರವನ್ನು ಮಲಯಾಳಂನ ಖ್ಯಾತ ನಟ ಫಹಾದ್ ಫಾಸಿಲ್ ನಿರ್ಮಿಸಿದ್ದಾರೆ.

ಸಿನಿಮಾದಲ್ಲಿ ಆಸ್ಪತ್ರೆಯನ್ನು ಖಾಸಗಿ ಸಂಸ್ಥೆ ಎಂದು ಬಿಂಬಿಸಲಾಗಿದೆ. ಇದೇ ವೇಳೆ ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಅಂಗಮಾಲಿ ತಾಲೂಕು ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿ ಚಲನಚಿತ್ರವನ್ನು ಏಕೆ ಚಿತ್ರೀಕರಿಸಲಾಗಿದೆ ಎಂಬುದನ್ನು ವಿವರಿಸುವಂತೆ ಆರೋಗ್ಯ ಇಲಾಖೆ ನಿರ್ದೇಶಕರನ್ನು ಕೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ