ಹೈದರಾಬಾದ್ : ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಹೈದರಾಬಾದ್ ನಲ್ಲಿ ಸಂವೇದನ ಸೃಷ್ಟಿಸಿದ ಪ್ರಣಯ್-ಅಮೃತ ಮರ್ಯಾದ ಹತ್ಯೆ ಪ್ರಕರಣವನ್ನು ಮರ್ಡರ್ ಚಿತ್ರ ಮಾಡಲು ಹೊರಟಿದ್ದರು. ಈ ಚಿತ್ರ ಪ್ರಾರಂಭದಲ್ಲಿಯೇ ಭಾರೀ ವಿವಾದಕ್ಕೊಳಗಾಗಿತ್ತು.
ಅಮೃತಾ ಈ ಚಿತ್ರ ಮಾಡಬಾರದೆಂದು ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಕೋರ್ಟ್ ಕೊನೆಗೆ ಚಿತ್ರ ಬಿಡುಗಡೆಗೆ ಅನುಮತಿ ನೀಡಿತ್ತು. ಈ ಹಿನ್ನಲೆಯಲ್ಲಿ ಈ ಚಿತ್ರವನ್ನು ಡಿಸೆಂಬರ್ 24ರಂದು ಬಿಡುಗಡೆ ಮಾಡುವುದಾಗಿ ಆರ್ ಜಿವಿ ಪ್ರಕಟಿಸಿದ್ದಾರೆ.
ಹಾಗಾಗಿ ಈ ಚಿತ್ರದ ಕುರಿತಾಗಿ ಪತ್ರಿಕಾಗೋಷ್ಠಿ ನಡೆಸಲು ಆರ್ ಜಿವಿ ತೀರ್ಮಾನಿಸಿದ್ದರು. ಆದರೆ ಇದರಿಂದ ಗಲಾಟೆ ನಡೆಯಬಹುದೆಂದು ಪೊಲೀಸರು ಪತ್ರಿಕಾಗೋಷ್ಠಿಗೆ ಅನುಮತಿ ನೀಡಲಿಲ್ಲ. ಹಾಗಾಗಿ ಪತ್ರಿಕಾಗೋಷ್ಠಿ ರದ್ದು ಮಾಡಿರುವುದಾಗಿ ವರ್ಮಾ ಟ್ವೀಟರ್ ನಲ್ಲಿ ತಿಳಿಸಿದ್ದಾರೆ.