ಬಿಡುಗಡೆಗೂ ಮುನ್ನ ಮಾಸ್ಟರ್ ಚಿತ್ರದ ಕಥೆ ಸೋರಿಕೆ ಮಾಡಿದ್ದು ಯಾರು ಗೊತ್ತಾ?
ಗುರುವಾರ, 14 ಜನವರಿ 2021 (10:57 IST)
ಚೆನ್ನೈ : ವಿಜಯ್ ಅಭಿನಯದ ಬಹುನಿರೀಕ್ಷೆಯ ಮಾಸ್ಟರ್ ಚಿತ್ರವನ್ನು ಜನವರಿ 13ರಂದು ವಿಶ್ವದಾದ್ಯಂತ ಬಿಡುಗಡೆ ಮಾಡಲಾಗಿದೆ. ಆದರೆ ಈ ಚಿತ್ರ ಬಿಡುಗಡೆಗೂ ಮುನ್ನ ಸೋರಿಕೆಯಾಗಿದೆ.
ದೀಪಾವಳಿಯಂದು ಬಿಡುಗಡೆಯಾಗಬೇಕಿದ್ದ ಮಾಸ್ಟರ್ ಚಿತ್ರವನ್ನು ಕೊರೊನಾ ಕಾರಣದಿಂದ ಮುಂದೂಡಲಾಗಿತ್ತು. ಆದರೆ ಈ ನಡುವೆ ಚಿತ್ರದ ಕಥೆ ಸೋರಿಕೆಯಾಗಿತ್ತು. ಇದರಿಂದ ಚಿತ್ರತಂಡ ಆಘಾತಕ್ಕೊಳಗಾಗಿದೆ. ಮತ್ತು ಅದನ್ನು ವೈರಲ್ ಮಾಡಬೇಡಿ ಎಂದು ನೆಟಿಜನ್ ಬಳಿ ಮನವಿ ಮಾಡಿದ್ದರು. ಆದರೆ ಯಾರು ಚಿತ್ರದ ಕಥೆಯನ್ನು ಸೋರಿಕೆ ಮಾಡಿದ್ದಾರೆ ಎಂಬುದು ತಿಳಿದಿರಲಿಲ್ಲ.
ಆದರೆ ಇದೀಗ ಚಿತ್ರ ಕಥೆ ಸೋರಿಕೆ ಮಾಡಿದ್ದು ಚೆನ್ನೈನ ಥಿಯೇಟರ್ ಉದ್ಯೋಗಿಯೊಬ್ಬರು ಎಂಬುದಾಗಿ ತಿಳಿದುಬಂದಿದ್ದು, ಈ ಬಗ್ಗೆ ಚಿತ್ರತಂಡ ದೂರು ದಾಖಲಿಸಿದೆ ಎನ್ನಲಾಗಿದೆ.