ಶಿವರಾಜ್‍ಕುಮಾರ್ ಅವರು ಅಪ್ಪಾಜಿ ಸ್ಮಾರಕಕ್ಕೆ ಪದೇ ಪದೇ ಭೇಟಿ ನೀಡಲ್ಲ ಎಂದು ಹೇಳಿದ್ದು ಯಾಕೆ ಗೊತ್ತಾ?
ಬುಧವಾರ, 21 ಮಾರ್ಚ್ 2018 (06:52 IST)
ಬೆಂಗಳೂರು : ಕನ್ನಡಿಗರ ಕಣ್ಣ್ಮಣಿ ಡಾ.ರಾಜ್ ಕುಮಾರ್ ಅವರ ಸ್ಮಾರಕವಿರುವ ಪುಣ್ಯ ಭೂಮಿಗೆ ನೂರಾರು ಜನ ಅಭಿಮಾನಿಗಳು ಪ್ರತಿದಿನ ಭೇಟಿ ನೀಡುತ್ತಿರುತ್ತಾರೆ. ಅದರಲ್ಲೂ ಕೆಲವರು ಒಂದು ಸಾರಿ ಅವರ ಪುಣ್ಯಭೂಮಿಯನ್ನು ನೋಡುವ ಭಾಗ್ಯ ನಮ್ಮದಾಗಲಿ ಎಂದು ಹಾತೋರೆಯುತ್ತಿರುತ್ತಾರೆ. ಆದರೆ ಅವರ ಮಗ ಶಿವರಾಜ್‍ಕುಮಾರ್ ಅವರು ಮಾತ್ರ ನಾನು ಅಪ್ಪಾಜಿ ಸ್ಮಾರಕಕ್ಕೆ ಪದೇ ಪದೇ ಭೇಟಿ ನೀಡಲ್ಲ ಎಂದು ಹೇಳಿದ್ದಾರೆ.
ಪುನೀತ್‍ರಾಜ್ ಕುಮಾರ್ ಅವರ ಹುಟ್ಟುಹಬ್ಬ ದಿನದಂದು ಮಾಧ್ಯಮಗಳ ಜೊತೆ ಮಾತನಾಡಿದ ಶಿವರಾಜ್‍ಕುಮಾರ್ ಅವರು ಈ ರೀತಿಯಾಗಿ ಹೇಳಿದ್ದು, ಇದಕ್ಕೆ ಕಾರಣವೆನೆಂಬುದನ್ನು ಕೂಡ ತಿಳಿಸಿದ್ದಾರೆ. ‘ಅಪ್ಪ-ಅಮ್ಮ ನಮ್ಮಿಂದ ದೂರವಾಗಿದ್ದಾರೆ ಅಂತ ನಮಗೆ ಅನ್ನಿಸುವುದಿಲ್ಲ. ಇಲ್ಲೇ ಎಲ್ಲೋ ಇದ್ದಾರೆ, ಯಾವುದೋ ಊರಿಗೆ ಹೋಗಿದ್ದಾರೆ ಬೇಗ ಬರ್ತಾರೆ ಅಂತ ಫೀಲ್ ಆಗುತ್ತದೆ. ಅದಕ್ಕೆ ನಾನು ಸ್ಮಾರಕಕ್ಕೂ ಜಾಸ್ತಿ ಹೋಗಲ್ಲ. ಅಪ್ಪಾಜಿ ಹಾಗೂ ಅಮ್ಮನನ್ನ ಸಮಾಧಿಯಲ್ಲಿ ನೋಡೋಕ್ಕೆ ಕಷ್ಟವಾಗುತ್ತದೆ. ಸ್ಮಾರಕ ನೋಡಿದಾಗ ಅವ್ರು ನಮ್ಮ ಜೊತೆಯಲ್ಲಿ ಇಲ್ಲವಲ್ಲಾ ಅನ್ನೋ ನೋವು ಜಾಸ್ತಿಯಾಗುತ್ತದೆ. ಈ ಕಾರಣಕ್ಕೆ ನಾನು ಜಾಸ್ತಿ ಸ್ಮಾರಕಕ್ಕೆ ಭೇಟಿ ಕೊಡುವುದಿಲ್ಲ’ ಎಂದು ಶಿವರಾಜ್ ಕುಮಾರ್ ಅವರು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ