ಮದವೇರಿದ ಬಾಂಗ್ಲಾ ಕ್ರಿಕೆಟಿಗರಿಗೆ ತಕ್ಕ ಶಾಸ್ತಿ ಮಾಡಿದ ಅಭಿಮಾನಿಗಳು

ಮಂಗಳವಾರ, 20 ಮಾರ್ಚ್ 2018 (09:42 IST)
ಕೊಲೊಂಬೊ: ಶ್ರೀಲಂಕಾ ಕ್ರಿಕೆಟ್ ಅಭಿಮಾನಿಗಳಿಗೆ ಬಾಂಗ್ಲಾ ಕ್ರಿಕೆಟಿಗರ ಮೇಲಿನ ರೋಷ ಮತ್ತಷ್ಟು ಹೆಚ್ಚಾಗಿದೆ. ಕೊನೆಯ ಲೀಗ್ ಪಂದ್ಯದಲ್ಲಿ ಬಾಂಗ್ಲಾ ಕ್ರಿಕೆಟಿಗರು ಮಾಡಿದ ಪುಂಡಾಟಕ್ಕೆ ಅಭಿಮಾನಿಗಳು ತಕ್ಕ ಪಾಠ ಕಲಿಸಿದ್ದಾರೆ.
 

ಲಂಕಾ ವಿರುದ್ಧ ‘ಕಾದಾಡಿ’ ಗೆದ್ದ ಬಾಂಗ್ಲಾ ಕ್ರಿಕೆಟಿಗರು ನಂತರ ನಾಗಿಣಿ ಡ್ಯಾನ್ಸ್ ಮಾಡಿ ಲೇವಡಿ ಮಾಡಿದ್ದರು. ತಮ್ಮದೇ ನಾಡಿನಲ್ಲಿ ಬಾಂಗ್ಲಾ ತಮ್ಮ ತಂಡದ ವಿರುದ್ಧ ನಡೆದುಕೊಂಡ ರೀತಿಗೆ ಲಂಕಾ ಅಭಿಮಾನಿಗಳಿಗೆ ಉರಿದು ಹೋಗಿತ್ತು.

ಅದೇ ಕಾರಣಕ್ಕೆ ಫೈನಲ್ ಪಂದ್ಯಕ್ಕೆ ಅತೀ ಹೆಚ್ಚು ಸಂಖ್ಯೆಯಲ್ಲಿ ಮೈದಾನದಲ್ಲಿ ಸೇರಿದ್ದ ಲಂಕಾ ಅಭಿಮಾನಿಗಳು ರೋಹಿತ್ ಬಳಗಕ್ಕೆ ಹುರಿದುಂಬಿಸಿದ್ದರು. ಅಷ್ಟೇ ಅಲ್ಲ ಭಾರತ ಗೆದ್ದಾಗ ಪ್ರೇಕ್ಷಕರು ನಾಗಿಣಿ ಡ್ಯಾನ್ಸ್ ಮಾಡಿ ಬಾಂಗ್ಲಾ ಕ್ರಿಕೆಟಿಗರ ಕಾಲೆಳೆದರು. ಇದೀಗ ಟ್ವಿಟರ್ ಮೂಲಕವೂ ನಾಗಿಣಿ ಡ್ಯಾನ್ಸ್ ಮೂಲಕ ಬಾಂಗ್ಲಾ ಕ್ರಿಕೆಟಿಗರನ್ನು ಟ್ರೋಲ್ ಮಾಡಲಾಗುತ್ತಿದೆ. ವಿಶೇಷವೆಂದರೆ ಕಾಮೆಂಟರಿ ಬಾಕ್ಸ್ ನಲ್ಲಿದ್ದ ಸುನಿಲ್ ಗವಾಸ್ಕರ್ ಕೂಡಾ ನಾಗಿಣಿ ಡ್ಯಾನ್ಸ್ ಮಾಡಿ ಸಂಭ್ರಮಿಸಿದ ಫೋಟೋಗಳೂ ಈಗ ಟ್ವಿಟರ್ ನಲ್ಲಿ ಹರಿದಾಡುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ