ತಮಿಳಿನ ಬಿಗ್‌ ಆಫರ್ ಕೈಬಿಟ್ಟ ಡಾಲಿ ಧನಂಜಯ್, ಕಾರಣ ಏನು ಗೊತ್ತಾ

Sampriya

ಬುಧವಾರ, 24 ಜುಲೈ 2024 (17:21 IST)
Photo Courtesy X
ಬೆಂಗಳೂರು: ನಟ ರಾಕ್ಷಸ ಎಂದೇ ಹೆಸರು ಗಳಿಸಿರುವ ಡಾಲಿ ಧನಂಜಯ್ ಅವರಿಗೆ ಇದೀಗ ಪರಭಾಷೆಯಲ್ಲಿ ಬೇಡಿಕೆ ಹೆಚ್ಚಿದೆ. ಧನಂಜಯ್ ಅವರು ಪುಷ್ಪಾದಲ್ಲಿ ಪ್ರಭಾಸ್‌ಗೆ ಕೌಂಟರ್ ಕೊಟ್ಟು ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ಒಳ್ಳೆಯ ಹೆಸರನ್ನು ಗಳಿಸಿದ್ದಾರೆ.

ಇದೀಗ ಡಾಲಿಗೆ ತಮಿಳು ನಟ ಸೂರ್ಯ ಅವರ ಜತೆ ಅಭಿನಯಿಸಲು ಆಫರ್ ಸಿಕ್ಕಿದೆ. ಆದರೆ ಈ ಆಫರ್‌ಗೆ ಡಾಲಿ ನೋ ಎಂದಿದ್ದಾರೆ.

ಇನ್ನು ಈ ಸಿನಿಮಾವನ್ನು ಕೈಬಿಟ್ಟಿದರ ಬಗ್ಗೆ ಪ್ರತಿಕ್ರಿಯಿಸಿದ ಡಾಲಿ , ಡೈರೆಕ್ಟರ್ ಕಾರ್ತಿಕ್ ಸುಬ್ಬರಾಜು ಅವರು ಸೂರ್ಯ 44ನೇ ಸಿನಿಮಾದಲ್ಲಿ ನಟಿಸೋಕೆ ಆಫರ್ ನೀಡಿದರು. ಆದರೆ ನನ್ನ ಡೇಟ್ಸ್ ಹೊಂದಿಕೆಯಾಗದ ಕಾರಣ ನನಗೆ ಆ ಸಿನಿಮಾದಲ್ಲಿ ಅಭಿನಯಿಸಲು ಸಾಧ್ಯವಾಗಿಲ್ಲ. ನನಗೂ ಸೂರ್ಯ ಅವರ ಜತೆ ಅಭಿನಯಿಸಲು ಹಾಗೂ ಕಾರ್ತಿಕ್ ಸುಬ್ಬರಾಜು ನಿರ್ದೇಶದಲ್ಲಿ ಕೆಲಸಮಾಡಲು ಹಂಬಲವಿತ್ತು ಎಂದಿದ್ದಾರೆ.

ನಟ ಸೂರ್ಯ ಅವರು ಅಭಿನಯಿಸುತ್ತಿರುವ ಸುಬ್ಬರಾಜು ನಿರ್ದೇಶನದ ಸಿನಿಮಾದ ಟೀಸರ್ ಈಗಾಗಲೇ ರಿಲೀಸ್ ಆಗಿದೆ. ಇನ್ನು ಟೀಸರ್ ನೋಡಿದ ಮಂದಿ ಸೂರ್ಯ ಲುಕ್‌ಗೆ ಫಿದಾ ಆಗಿದ್ದಾರೆ. ಟೀಸರ್‌ನಲ್ಲಿ ಗ್ಯಾಂಗ್‌ಸ್ಟರ್ ಅವತಾರದಲ್ಲಿ ಸೂರ್ಯ ಅವರು ಕಾಣಿಸಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ