ಜೈಲಿನಲ್ಲಿ ಕಾಡುತ್ತಿರುವ ಒಂಟಿತನಕ್ಕೆ ದರ್ಶನ್ ಆಧ್ಯಾತ್ಮದ ಕಡೆ ಒಲವು

Sampriya

ಬುಧವಾರ, 24 ಜುಲೈ 2024 (14:55 IST)
ಬೆಂಗಳೂರು: ಹೊರಗಡೆ ಐಷರಾಮಿ ಜೀವನ ನಡೆಸುತ್ತಿದ್ದ ನಟ ದರ್ಶನ್ ಅವರು ಇದೀಗ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿ 1 ತಿಂಗಳು ಕಳೆಯುತ್ತಾ ಬಂದಿದೆ.

ಜೈಲು ಸೇರಿದ ಬಳಿಕ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕುಗ್ಗಿರುವ ದರ್ಶನ್ ಅವರು ಈ ಪ್ರಕರಣದಿಂದ ಹೊರ ಬರಲು ಪ್ರಯತ್ನಿಸುತ್ತಿದ್ದಾರೆ. ಪತ್ನಿ ವಿಜಯಲಕ್ಷ್ಮೀ ಅವರು ಪತಿಯನ್ನು ಈ ಪ್ರಕರಣದಿಂದ ಪಾರು ಮಾಡಲು ಕಾನೂನಿನ ಹೋರಾಟ ನಡೆಸುತ್ತಿದ್ದಾರೆ. ಇದರ ಮಧ್ಯೆ ದರ್ಶನ್ ಅವರಿಗೆ ಧೈರ್ಯ ತುಂಬಲು ಪತ್ನಿ ವಿಜಯಲಕ್ಷ್ಮೀ ಅವರು ಆಗಾಗ ಜೈಲಿನತ್ತ ಬರುತ್ತಿದ್ದಾರೆ.

ವಿಐಪಿ ರೂಂನಲ್ಲಿ ಒಬ್ಬಂಟಿಯಾಗಿ ದಿನ ಕಳೆಯುತ್ತಿರುವ ನಟ ದರ್ಶನ್ ಅವರು  ಪುಸ್ತಕಗಳನ್ನು ಓದುತ್ತಿದ್ದಾರೆ. ದಿನದಲ್ಲಿ ಪುಸ್ತಕಗಳನ್ನು ಹೆಚ್ಚು ಓದುತ್ತಾ ಸಮಯ ಕಳೆಯುತ್ತಿದ್ದಾರೆ ಎಂಬ ಮಾಹಿಯಿಯಿದೆ.  ಇದರ ಜತೆಗೆ ಬೆಳಿಗ್ಗೆ  ಮತ್ತು ಸಂಜೆ ಧ್ಯಾನ ಮಾಡಿ ಮಾನಸಿಕವಾಗಿ ದೃಢವಾಗಿರಲು ಪ್ರಯತ್ನಿಸುತ್ತಿದ್ದಾರೆ ಎಂಬ ಮೂಲಗಳಿಂದ ತಿಳಿದುಬಂದಿದೆ.

ಇನ್ನೂ ಜೈಲಿನ ಊಟಕ್ಕೆ ಹೊಂದಲು ಕಷ್ಟ ಪಡುತ್ತಿರುವ ದರ್ಶನ್ ಅವರು ವಕೀಲರ ಮೂಲಕ ತನಗೆ ಮನೆಯೂಟ ನೀಡಲು ಅನುಮತಿ ಕೋರಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಸಂಬಂಧ ಕೋರ್ಟ್‌ ಆದೇಶವನ್ನು ಕಾಯ್ದಿರಿಸಿದೆ. ಸದ್ಯ ದರ್ಶನ್‌ಗೆ ಇದೀಗ ಜೈಲೂಟನೇ ನೀಡಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ