ನಮ್ ಕನ್ನಡದ ಹುಡುಗಿ ರಶ್ಮಿಕಾ: ಪುಷ್ಪ ವೇದಿಕೆಯಲ್ಲಿ ಹೊಗಳಿದ ಡಾಲಿ ಧನಂಜಯ್

ಸೋಮವಾರ, 13 ಡಿಸೆಂಬರ್ 2021 (10:30 IST)
ಹೈದರಾಬಾದ್: ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪಾ ಬಿಡುಗಡೆಗೆ ಸಿದ್ಧವಾಗಿದೆ. ಇದಕ್ಕೂ ಮೊದಲು ಚಿತ್ರತಂಡ ಅದ್ಧೂರಿಯಾಗಿ ಪ್ರಿ ರಿಲೀಸ್ ಈವೆಂಟ್ ಆಯೋಜಿಸಿದೆ.

ಪುಷ್ಪ ಸಿನಿಮಾದಲ್ಲಿ ಕನ್ನಡದ ಡಾಲಿ ಧನಂಜಯ್ ಕೂಡಾ ನಟಿಸುತ್ತಿದ್ದಾರೆ. ಪ್ರಿರಿಲೀಸ್ ಈವೆಂಟ್ ನಲ್ಲಿ ಭಾಗಿಯಾಗಿರುವ ಧನಂಜಯ್‍ ಕನ್ನಡದಲ್ಲೂ ಪುಷ್ಪ ರಿಲೀಸ್ ಆಗುತ್ತಿದೆ ಎಲ್ಲರೂ ನೋಡಿ ಎಂಜಾಯ್ ಮಾಡಿ ಎಂದಿದ್ದಾರೆ.

ಜೊತೆಗೆ ಈ ಸಿನಿಮಾದಲ್ಲಿ ಒಳ್ಳೆಯ ತಂತ್ರಜ್ಞರ ಜೊತೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಜೊತೆಗೆ ನಮ್ಮ ಕನ್ನಡದ ಹುಡುಗಿ ರಶ್ಮಿಕಾ. ಅವರ ಜೊತೆ ಅಭಿನಯಿಸಿದ್ದು ಒಳ್ಳೆಯ ಅನುಭವ ಎಂದು ರಶ್ಮಿಕಾರನ್ನು ವೇದಿಕೆಯಲ್ಲಿ ಹೊಗಳಿದ್ದಾರೆ. ಇದಕ್ಕೆ ರಶ್ಮಿಕಾ ಕೂಡಾ ನಗುತ್ತಲೇ ಕೈ ಬೀಸಿ ಧನ್ಯವಾದ ಸಲ್ಲಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ