ಮದುವೆ ಕರೆಯೋಲೆ ಜೊತೆ ಪ್ರೀತಿ ಹುಟ್ಟಿದ್ದು ಹೇಗೆ ಎಂದು ವಿವರಿಸಿದ ಹರ್ಷಿಕಾ ಪೂಣಚ್ಚ, ಭುವನ್
ಆಗಸ್ಟ್ 24 ರಂದು ಹರ್ಷಿಕಾ-ಭುವನ್ ತಮ್ಮ 12 ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆಯೊತ್ತಲಿದ್ದಾರೆ. ಕೊಡಗಿನಲ್ಲಿ ಕೊಡವ ಸಂಪ್ರದಾಯದಂತೆ ಮದುವೆಯಾಗಲಿದ್ದಾರೆ. ಇದಕ್ಕಾಗಿ ಮಾಧ‍್ಯಮಗಳ ಮೂಲಕ ಆಹ್ವಾನ ನೀಡಿದ್ದಾರೆ. ಅಲ್ಲದೆ, ತಮ್ಮ ನಡುವೆ ಪ್ರೀತಿ ಹುಟ್ಟಿದ್ದು ಹೇಗೆ ಎಂಬುದನ್ನೂ ವಿವರಿಸಿದ್ದಾರೆ.
ಫ್ಯಾಶನ್ ಶೋ ಒಂದರಲ್ಲಿ ಇಬ್ಬರೂ ಮೊದಲ ಭಾರಿ ಭೇಟಿಯಾಗಿದ್ದರು. ಬಳಿಕ ಅಗ್ರಜ ಸಿನಿಮಾ ಮುಹೂರ್ತ ಕಾರ್ಯಕ್ರಮದಲ್ಲಿ ಇಬ್ಬರೂ ಭೇಟಿಯಾಗಿದ್ದರು. ಅದಾದ ಬಳಿಕ ಭುವನ್ ಮೆಸೇಜ್ ಮಾಡಿ ಪ್ರಪೋಸ್ ಮಾಡಿದ್ದರು ಎಂದಿದ್ದಾರೆ ಹರ್ಷಿಕಾ. 12 ವರ್ಷಗಳ ಕಾಲ ಇಬ್ಬರೂ ಪ್ರೀತಿ ಮಾಡಿದ್ದಾರೆ. ಮನೆಯವರ ಒಪ್ಪಿಗೆ ಪಡೆದು ಇದೀಗ ಮದುವೆಯಾಗುತ್ತಿದ್ದಾರೆ.