ಎಲ್ಲೆಲ್ಲೂ ಡಾಲಿ ಧನಂಜಯ್ #ನನ್ನವ್ವ ಕವಿತೆ ಹವಾ!

ಶನಿವಾರ, 8 ಜನವರಿ 2022 (09:30 IST)
ಬೆಂಗಳೂರು: ಡಾಲಿ ಧನಂಜಯ್ ಇತ್ತೀಚೆಗೆ ಕಲರ್ಸ್ ಕನ್ನಡ ವಾಹಿನಿಯ ನನ್ನಮ್ಮ ಸೂಪರ್ ಸ್ಟಾರ್ ಶೋನಲ್ಲಿ ಭಾಗಿಯಾಗಿದ್ದರು. ಈ ವೇಳೆ ಅಮ್ಮನ ಕುರಿತಾಗಿ ಕವನವೊಂದನ್ನು ಓದಿದ್ದರು.

ಧನಂಜಯ್ ಅಮ್ಮನ ಕುರಿತಾಗಿ ಹೇಳಿದ್ದ ನನ್ನವ್ವ ಕವಿತೆ ಈಗ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದೆ. ಪ್ರತಿಯೊಬ್ಬರೂ ಧನಂಜಯ್ ಸಾಲುಗಳನ್ನೇ ತಮಗೆ ಅನ್ವಯಿಸಿಕೊಂಡು ತಮ್ಮದೇ ರೀತಿಯಲ್ಲಿ ನನ್ನವ್ವ ಎಂದು ಕವನದ ಸಾಲುಗಳನ್ನು ಬರೆದುಕೊಳ್ಳುತ್ತಿದ್ದಾರೆ!

ಕೆಲವು ಸೀರಿಯಲ್ ಅಭಿಮಾನಿಗಳು, ವಿದ್ಯಾರ್ಥಿಗಳು ನನ್ನವ್ವ ಎಂದು ಕವಿತೆ ಬರೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಳ್ಳುತ್ತಿದ್ದಾರೆ. ಅಂತೂ ಧನಂಜಯ್ ತಮ್ಮ ಅಮ್ಮನ ಕುರಿತಾಗಿ ಹೇಳಿದ್ದ ಕವನವೊಂದು ಈಗ ಎಲ್ಲೆಡೆ ವೈರಲ್ ಆಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ