ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ರಿ ಎಂಟ್ರಿ ಕೊಡ್ತಿದ್ದಾರೆ ಮೇಘನಾ ರಾಜ್
ಕಲರ್ಸ್ ಕನ್ನಡ ವಾಹಿನಿಯಲ್ಲಿ ಇದೇ ಶನಿವಾರದಿಂದ ಡ್ಯಾನ್ಸಿಂಗ್ ರಿಯಾಲಿಟಿ ಶೋ ಆರಂಭವಾಗಲಿದೆ. ಈ ರಿಯಾಲಿಟಿ ಶೋನಲ್ಲಿ ಈ ವಾರ ಮೇಘನಾ ತೀರ್ಪುಗಾರರಾಗಿ ಭಾಗಿಯಾಗಲಿದ್ದಾರೆ.
ಇದು ಮೇಘನಾ ಪಾಲಿಗೆ ಮೊದಲ ಕಿರುತೆರೆ ಡ್ಯಾನ್ಸ್ ಶೋ. ಆದರೆ ಬಹಳ ದಿನಗಳ ನಂತರ ಬಣ್ಣದ ಲೋಕಕ್ಕೆ ಮರಳಿದ ಮೇಘನಾರನ್ನು ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ. ಸೃಜನ್ ಲೋಕೇಶ್ ತಮ್ಮ ಹೋಂ ಬ್ಯಾನರ್ ಲೋಕೇಶ್ ಪ್ರೊಡಕ್ಷನ್ಸ್ ನಡಿಯಲ್ಲಿ ಈ ರಿಯಾಲಿಟಿ ಶೋ ಅರ್ಪಿಸುತ್ತಿದ್ದಾರೆ.