ಬೆಂಗಳೂರು: ನಟಿ ರಮ್ಯಾ ದೊಡ್ಮನೆ ಹುಡುಗ ವಿನಯ್ ರಾಜ್ ಕುಮಾರ್ ಜೊತೆ ಕೈ ಕೈ ಹಿಡಿದುಕೊಂಡು ಅಮೆರಿಕಾದಲ್ಲಿ ವಾಕಿಂಗ್ ಮಾಡುವ ಫೋಟೋಗಳು ವೈರಲ್ ಆಗಿದ್ದವು. ಇದೀಗ ತಮ್ಮ ಮತ್ತು ವಿನಯ್ ನಡುವಿನ ಸಂಬಂಧವೇನು ಎಂಬ ಬಗ್ಗೆ ರಮ್ಯಾ ಸ್ಪಷ್ಟನೆ ನೀಡಿದ್ದಾರೆ.
ರಮ್ಯಾ ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ನಿನ್ನೆ ವಿನಯ್ ರಾಜ್ ಕುಮಾರ್ ಮತ್ತು ಪುನೀತ್ ಮಗಳು ವಂದಿತಾ ಜೊತೆ ಅಮೆರಿಕಾದಲ್ಲಿ ಸುತ್ತಾಡುತ್ತಿರುವ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡಿದ್ದರು. ಇದರಲ್ಲಿ ವಿನಯ್ ಮತ್ತು ರಮ್ಯಾ ಕ್ಲೋಸ್ ಆಗಿರುವ ಫೋಟೋಗಳು ಎಲ್ಲರ ಗಮನ ಸೆಳೆದಿತ್ತು.
ಕೆಲವು ದಿನಗಳ ಹಿಂದೆ ವಿನಯ್ ಜೊತೆ ರಮ್ಯಾ ಫೋಟೋ ಶೂಟ್ ಕೂಡಾ ಮಾಡಿಸಿಕೊಂಡಿದ್ದರು. ಇದೇ ಕಾರಣಕ್ಕೆ ಅವರ ಪೋಸ್ಟ್ ಗೆ ಹಲವರು ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರಾ ಎಂದು ಕಾಲೆಳೆದಿದ್ದರು. ಮಾಧ್ಯಮಗಳೂ ಇದೇ ರೀತಿ ಸುದ್ದಿ ಮಾಡಿದ್ದವು.
ಇದರ ಬೆನ್ನಲ್ಲೇ ರಮ್ಯಾ ಸ್ಪಷ್ಟನೆ ಕೊಟ್ಟಿದ್ದಾರೆ. ನನಗೆ ನಿಮ್ಮ ಕಾಮೆಂಟ್ ನೋಡಿ ನಗು ಬರುತ್ತಿದೆ. ವಿನಯ್ ಸಹೋದರನ ಸಮಾನ. ನಿಮ್ಮ ಕಲ್ಪನೆಗೂ ಸ್ವಲ್ಪ ಮಿತಿಯಿರಲಿ ಎಂದು ರಮ್ಯಾ ಹೇಳಿದ್ದಾರೆ. ಆ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದಾರೆ.