ಕಾಂತಾರ ಚಾಪ್ಟರ್ 1 ಬಗ್ಗೆ ಕೊನೆಗೂ ಬಂತು ಒಂದು ಗುಡ್ ನ್ಯೂಸ್

Krishnaveni K

ಗುರುವಾರ, 11 ಸೆಪ್ಟಂಬರ್ 2025 (10:28 IST)
ಬೆಂಗಳೂರು: ಕಾಂತಾರ ಚಾಪ್ಟರ್ 1 ಸಿನಿಮಾ ಬಿಡುಗಡೆಗೆ ಇನ್ನು ಕೇವಲ 20 ದಿನ ಬಾಕಿಯಿದೆ. ಆದರೆ ಇದುವರೆಗೆ ಚಿತ್ರತಂಡದಿಂದ ಯಾವುದೇ ಅಪ್ ಡೇಟ್ ಇಲ್ಲ ಎಂದು ಬೇಸರದಲ್ಲಿದ್ದ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದೆ.

ಕಾಂತಾರ ಚಾಪ್ಟರ್ 1 ಸಿನಿಮಾ ಅಕ್ಟೋಬರ್ 2 ಕ್ಕೆ ವಿಶ್ವದಾದ್ಯಂತ ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಬೇರೆ ಬೇರೆ ಭಾಷೆಗಳಲ್ಲಿ ದಾಖಲೆಯ ಮೊತ್ತಕ್ಕೆ ಚಿತ್ರದ ವಿತರಣೆ ಹಕ್ಕು ಮಾರಾಟವಾಗಿದೆ. ಆದರೆ ಸಿನಿಮಾ ತಂಡ ಇದುವರೆಗೆ ಬೇರೆ ಯಾವುದೇ ಅಪ್ ಡೇಟ್ ಕೊಟ್ಟಿರಲಿಲ್ಲ.

ಆದರೆ  ಈಗ ಮೂಲಗಳ ಪ್ರಕಾರ ಸೆಪ್ಟೆಂಬರ್ 20 ರಂದು ಕಾಂತಾರ ಚಾಪ್ಟರ್ 1 ಟ್ರೈಲರ್ ಬಿಡುಗಡೆಯಾಗಲಿದೆ. ಈಗಾಗಲೇ ಟ್ರೈಲರ್ ಬಿಡುಗಡೆಗೆ ಸಿದ್ಧತೆಯೂ ನಡೆದಿದೆ. ಟ್ರೈಲರ್ ಗಾಗಿಯೇ ಈಗ ಅಭಿಮಾನಿಗಳು ಕಾಯುತ್ತಿದ್ದಾರೆ.

ಇನ್ನು, ಕಾಂತಾರ  ಚಾಪ್ಟರ್ 1 ಸಿನಿಮಾದ ಒಟಿಟಿ ಹಕ್ಕು ಬರೋಬ್ಬರಿ 125 ಕೋಟಿ ರೂ.ಗೆ ಬಿಡುಗಡೆಯಾಗಿದೆ ಎನ್ನಲಾಗಿದೆ. ಅಮೆಝೋನ್ ಪ್ರೈಮ್ ಒಟಿಟಿ ಹಕ್ಕು ಖರೀದಿ ಮಾಡಿದೆ. ಈ ಹಿಂದೆ ಕಾಂತಾರ ಸಿನಿಮಾವನ್ನೂ ಅಮೆಝೋನ್ ಪ್ರೈಮ್ ಖರೀದಿ ಮಾಡಿತ್ತು. ಈ ಮೂಲಕ ಈಗ ಕಾಂತಾರ ಚಾಪ್ಟರ್ 1 ಬಿಡುಗಡೆಗೆ ಮುನ್ನವೇ ಲಾಭದಲ್ಲಿದೆ ಎನ್ನಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ