ಡಾ.ರಾಜ್ ಬರ್ತಡೇಗೆ 90 ಕೆಜಿ ಕೇಕ್

ಮಂಗಳವಾರ, 24 ಏಪ್ರಿಲ್ 2018 (13:22 IST)
ನಗರದಲ್ಲಿ 90 ಕೆಜಿ ಕೇಕ್ ಕಟ್ ಮಾಡುವ ಮೂಲಕ ವರನಟ ಡಾ.ರಾಜ್ ಕುಮಾರ್ ರವರ ಹುಟ್ಟು ಹಬ್ಬ ಆಚರಣೆ ಮಾಡಲಾಯಿತು. 

ಶಿವಮೊಗ್ಗದ ಜ್ವಾಲಮುಖಿ ಕನ್ನಡ ಸಂಘದ ವತಿಯಿಂದ ಡಾ. ರಾಜಕುಮಾರ ಅವರ  90 ನೇ ಹುಟ್ಟು ಹಬ್ಬಕ್ಕೆ 90 ಕೆ.ಜಿ.ಕೇಕ್ ತಯಾರಿಸಿ ಆಚರಣೆ ಮಾಡಲಾಗಿದೆ. 
 
ಶಿವಮೊಗ್ಗದ ಗೋಪಿ ವೃತ್ತದಲ್ಲಿ ಹುಟ್ಟು ಹಬ್ಬ ಆಚರಣೆ ಮಾಡಿರುವ ಸಂಘದ ಸದಸ್ಯರು, ರಾಜಕುಮಾರ ಪರ ಘೋಷಣೆ ಕೂಗಿದರು. 
 
ಅನಾಥ ಮಕ್ಕಳಿಗೆ ಹಾಗೂ ರಾಜ್ ಕುಮಾರ್ ಅಭಿಮಾನಿಗಳಿಗೆ ಕೇಕ್ ಹಂಚಲಾಯಿತು. ಆ ಮೂಲಕ ವಿನೂತನವಾಗಿ ರಾಜಕುಮಾರ ಅವರ ಬರ್ತಡೇ ಆಚರಣೆ ಮಾಡಲಾಯಿತು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ