ಎಕ್ಕ ಮೂವಿ ಹೇಗಿದೆ: ಫಸ್ಟ್ ಹಾಫ್ ನೋಡಿದ ಪ್ರೇಕ್ಷಕರು ಏನಂತಿದ್ದಾರೆ
ಎಕ್ಕ ಸಿನಿಮಾ ಬ್ಯಾಂಗಲ್ ಬಂಗಾರಿ ಹಾಡಿನ ಮೂಲಕ ಬಿಡುಗಡೆಗೆ ಮೊದಲೇ ಜನರಲ್ಲಿ ಕುತೂಹಲ ಕೆರಳಿಸಿತ್ತು. ಅಲ್ಲದೆ, ದೊಡ್ಮನೆ ಹುಡುಗ ಅಭಿನಯಿಸಿರುವ ಸಿನಿಮಾ ಆಗಿರುವ ಕಾರಣಕ್ಕೆ ಜನರು ಸಾಕಷ್ಟು ಸಂಖ್ಯೆಯಲ್ಲಿ ಸಿನಿಮಾ ನೋಡಲು ಥಿಯೇಟರ್ ಗೆ ಬಂದಿದ್ದಾರೆ.
ಮೊದಲ ಹಾಫ್ ನೋಡಿದ ಪ್ರೇಕ್ಷಕರು ಎಕ್ಕ ಸಿನಿಮಾಗೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಒಂದೊಳ್ಳೆ ಕತೆ ಪ್ರೇಕ್ಷಕರ ಮುಂದಿಟ್ಟ ರೋಹಿತ್ ಫಡ್ಕಿಗೆ ಜನ ಜೈ ಎಂದಿದ್ದಾರೆ. ಒಂದು ಮಾಸ್ ಸಿನಿಮಾಗೆ ಬೇಕಾದ ಎಲ್ಲಾ ಅಂಶವೂ ಚಿತ್ರದಲ್ಲಿದೆ. ಕತೆ ತುಂಬಾ ಇಂಟ್ರೆಸ್ಟಿಂಗ್ ಆಗಿದೆ. ಆದರೆ ಯುವ ರಾಜ್ ಕುಮಾರ್ ನಟನಾಗಿ ಇನ್ನಷ್ಟು ಮಾಗಬೇಕು ಎಂದು ಪ್ರೇಕ್ಷಕರು ಹೇಳಿದ್ದಾರೆ.
ಆದರೆ ಹಿನ್ನಲೆ ಸಂಗೀತ ಎಲ್ಲವನ್ನೂ ಮರೆಸುತ್ತದೆ. ಆದರೆ ಆಕ್ಷನ್ ದೃಶ್ಯದಲ್ಲಿ ಯುವ ಮಿಂಚಿದ್ದಾರೆ. ಕ್ಲೈಮ್ಯಾಕ್ಸ್ ಫೈಟ್ ಸಖತ್ ಆಗಿದೆ. ಖಂಡಿತಾ ಯುವ ಸ್ಯಾಂಡಲ್ ವುಡ್ ಗೆ ಒಳ್ಳೆಯ ಹೀರೋ ಆಗ್ತಾರೆ ಎಂದು ಸಿನಿಮಾ ನೋಡಿದ ಪ್ರೇಕ್ಷಕರು ಅಭಿಪ್ರಾಯ ಹಂಚಿಕೊಂಡಿದ್ದಾರೆ.