ಧನ್ಯಾ ಮೊದಲ ಸಿನಿಮಾಗೆ ಒಂದಾದ ಡಾ.ರಾಜ್ ಕುಟುಂಬ

ಮಂಗಳವಾರ, 5 ಅಕ್ಟೋಬರ್ 2021 (10:42 IST)
ಬೆಂಗಳೂರು: ಮನೆ ಮಗಳು ಧನ್ಯಾ ಮೊದಲ ಬಾರಿಗೆ ಅಭಿನಯಿಸಿರುವ ‘ನಿನ್ನ ಸನಿಹಕೆ’ ಸಿನಿಮಾ ಇದೇ ಅಕ್ಟೋಬರ್ 8 ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಈ ಸಿನಿಮಾ ಯಶಸ್ವಿಗೊಳಿಸಲು ಈಗ ಡಾ. ರಾಜ್ ಕುಟುಂಬ ಜೊತೆಯಾಗಿದೆ.


ಅಕ್ಟೋಬರ್ 7 ರಂದು ಚಿತ್ರದ ಪ್ರೀಮಿಯರ್ ಶೋ ನಡೆಯಲಿದ್ದು, ಈ ಶೋನಲ್ಲಿ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ರಾಘಣ್ಣ ಸೇರಿದಂತೆ ಇಡೀ ರಾಜ್ ಕುಟುಂಬವೇ ಹಾಜರಿರಲಿದೆ ಎನ್ನಲಾಗಿದೆ.

ಸೂರಜ್-ಧನ್ಯಾ ಅಭಿನಯದ ರೊಮ್ಯಾಂಟಿಕ್ ಸಿನಿಮಾ ನೋಡಲು ಈಗಾಗಲೇ ಸೂಪರ್ ಸ್ಟಾರ್ ರಜನೀಕಾಂತ್ ಕೂಡಾ ಆಸಕ್ತಿ ತೋರಿಸಿದ್ದಾರೆ. ಹೀಗಾಗಿ ಈ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ