ನಟಿ ಹನ್ಸಿಕಾ ಕುರಿತು ಮ್ಯಾನೇಜರ್ ಇದೆಂಥ ಆರೋಪ ಹೊರಿಸಿದ್ದು…?

ಶುಕ್ರವಾರ, 16 ಮಾರ್ಚ್ 2018 (06:01 IST)
ಚೆನ್ನೈ : ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ  ಅಭಿನಯದ ‘ಬಿಂದಾಸ್’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ ದಕ್ಷಿಣ ಭಾರತದ ನಟಿ ಹನ್ಸಿಕಾ ಮೋಟ್ವಾನಿ ಅವರು ಸಂಬಳ ನೀಡಿಲ್ಲವೆಂದು ಆರೋಪಿಸಿ ಆಕೆಯ  ವಿರುದ್ದ ಮ್ಯಾನೇಜರ್ ಒಬ್ಬರು ದೂರು ನೀಡಿದ್ದಾರೆ.


ಮ್ಯಾನೇಜರ್ ಮುನಿಸ್ವಾಮಿ ಎಂಬುವವರು,’ ನಾನು ಹಲವು ವರ್ಷಗಳಿಂದ ಹನ್ಸಿಕಾ ಅವರ ಬಳಿ ಕೆಲಸ ಮಾಡುತ್ತಿದ್ದೇನೆ. ಬಹಳ ದಿನಗಳಿಂದ ಹನ್ಸಿಕಾ ನನಗೆ ಸಂಬಳ ನೀಡದೆ ಸತಾಯಿಸುತ್ತಿದ್ದಾರೆ’ ಎಂದು ತಿಳಿಸಿ ನಟಿಯ ವಿರುದ್ಧ ತಮಿಳುನಾಡು ಕಲಾವಿದರ ಸಂಘದಲ್ಲಿ ದೂರು ದಾಖಲಿಸಿದ್ದಾರೆ.


ಆದರೆ ಸಿನಿಮಾರಂಗದವರು ಮಾತ್ರ 'ಹನ್ಸಿಕಾ ಅವರ ಮೊದಲ ಸಿನಿಮಾದಿಂದ ಇದುವರೆಗೂ ಅವರ ತಾಯಿ ಮೋನಾ ಮೊಟ್ವಾನಿ ಅವರೇ ಡೇಟ್, ಸಂಭಾವನೆಗೆ ಸಂಬಂಧಪಟ್ಟ ಎಲ್ಲಾ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು’ ಎಂದು ಹೇಳುತ್ತಿದ್ದಾರೆ. ಅಲ್ಲದೇ ಹಿಂದೊಮ್ಮೆ ಹನ್ಸಿಕಾ ಅವರು ಕೂಡ ತನ್ನ ತಾಯಿಯೇ ತನಗೆ ಸಂಬಂಧಪಟ್ಟ ಎಲ್ಲಾ ವ್ಯವಹಾರಗಳನ್ನು ನೋಡಿಕೊಳ್ಳುತ್ತಾರೆ ಎಂದು ತಿಳಿಸಿದ್ದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ