ಡ್ರಗ್ಸ್ ಕೇಸ್: ರಾಣಾ ದಗ್ಗುಬಟ್ಟಿ, ರವಿತೇಜ ಸೇರಿ 8 ಸೆಲೆಬ್ರಿಟಿಗಳಿಗೆ ಇಡಿ ನೋಟಿಸ್

ಗುರುವಾರ, 26 ಆಗಸ್ಟ್ 2021 (10:23 IST)
ಹೈದರಾಬಾದ್: ಮಾದಕ ವಸ್ತು ಜಾಲ ಟಾಲಿವುಡ್ ನಲ್ಲೂ ತಳವೂರಿದೆ ಎನ್ನುವುದು ಈಗಾಗಲೇ ಎಲ್ಲರಿಗೂ ಗೊತ್ತಿರುವ ವಿಚಾರ. ಈಗ ಖ್ಯಾತ ನಟ ರಾಣಾ ದಗ್ಗುಬಟ್ಟಿ, ರವಿತೇಜ, ರಾಕುಲ್ ಪ್ರೀತ್ ಸಿಂಗ್ ಸೇರಿ 8 ಸೆಲೆಬ್ರಿಟಿಗಳಿಗೆ ಇಡಿ ಸಮನ್ಸ್ ಜಾರಿ ಮಾಡಿದೆ.


ನಾಲ್ಕು ವರ್ಷಗಳ ಹಿಂದೆ ದೊಡ್ಡ ಮಾದಕ ವಸ್ತು ಜಾಲ ಪತ್ತೆಯಾಗಿತ್ತು. ಆ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಕೂಡಾ ನಡೆದಿದ್ದು ಬೆಳಕಿಗೆ ಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ನಟರಿಗೆ ಈಗ ಇಡಿ ಸಮನ್ಸ್ ಜಾರಿ ಮಾಡಿದೆ.

ಸೆಪ್ಟೆಂಬರ್ 6 ರಂದು ರಾಕುಲ್, ಸೆಪ್ಟೆಂಬರ್ 8 ರಂದು ರಾಣಾ,  ಸೆಪ್ಟೆಂಬರ್ 9 ರಂದು ರವಿತೇಜ, ಸೆಪ್ಟೆಂಬರ್ 31 ರಂದು ಪುರಿ ಜಗನ್ನಾಥ್ ಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ