ಡ್ರಗ್ ಕೇಸ್: ಸ್ಯಾಂಡಲ್ ವುಡ್ ನಟಿ ಮನೆ ಮೇಲೆ ದಾಳಿ

ಸೋಮವಾರ, 30 ಆಗಸ್ಟ್ 2021 (09:42 IST)
ಬೆಂಗಳೂರು: ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಬೇಟೆ ಮುಂದುವರಿದಿದೆ. ಇಂದು ಬೆಳ್ಳಂ ಬೆಳಿಗ್ಗೆ ನಟಿ
ಸೋನಿಯಾ ಅಗರ್ವಾಲ್, ಡಿಜೆ ಚಿನ್ನಪ್ಪ, ಉದ್ಯಮಿ ಭರತ್ ಎಂಬವರ ಮನೆ ಮೇಲೆ ದಾಳಿ ನಡೆಸಿ ಪೊಲೀಸರು ಪರಿಶೋಧನೆ ನಡೆಸಿದ್ದಾರೆ ಎನ್ನಲಾಗಿದೆ.



ಡ್ರಗ್ ಪೆಡ್ಲರ್ ಥಾಮಸ್‍ ಎಂಬಾತನನ್ನು ಪೊಲೀಸರು ಈ ಮೊದಲು ಬಂಧಿಸಿದ್ದರು. ಆತ ನೀಡಿದ ಮಾಹಿತಿಯಂತೆ ಪೊಲೀಸರು ಇದೀಗ ಸೆಲೆಬ್ರಿಟಿಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಒಂದು ವೇಳೆ ಈ ಸೆಲೆಬ್ರಿಟಿಗಳ ಮನೆಯಲ್ಲಿ ಡ್ರಗ್ ಬಳಕೆ ಸಂಬಂಧ ಸೂಕ್ತ ಸಾಕ್ಷ್ಯಾಧಾರ ಸಿಕ್ಕರೆ ಬಂಧನವಾಗುವ ಸಾಧ್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ