1 ಲಕ್ಷ ರೂ. ಚೆಕ್ ಗೃಹ ಸಚಿವರಿಗೆ ಹಸ್ತಾಂತರಿಸಿದ ನಟ ಜಗ್ಗೇಶ್ ದಂಪತಿ

ಭಾನುವಾರ, 29 ಆಗಸ್ಟ್ 2021 (10:12 IST)
ಬೆಂಗಳೂರು: ಮೈಸೂರು ಗ್ಯಾಂಗ್ ರೇಪ್ ಪ್ರಕರಣ ಬೇಧಿಸಿದ ಪೊಲೀಸರಿಗೆ 1 ಲಕ್ಷ ರೂ. ನಗದು ಬಹುಮಾನ ಘೋಷಿಸಿದ್ದ ನವರಸನಾಯಕ ಜಗ್ಗೇಶ್ ತಮ್ಮ ಮಾತು ಉಳಿಸಿಕೊಂಡಿದ್ದಾರೆ.


ಗೃಹ ಸಚಿವ ಅರಗ ಜ್ಞಾನೇಂದ್ರ ಅವರನ್ನು ಭೇಟಿಯಾದ ಜಗ್ಗೇಶ್ ದಂಪತಿ 1 ಲಕ್ಷ ರೂ.ಗಳ ಬಹುಮಾನದ ಚೆಕ್ ನ್ನು ಹಸ್ತಾಂತರಿಸಿದ್ದಾರೆ. ಇದು ಕಾಮುಕರನ್ನು ಬೇಟೆಯಾಡಿದ ಪೊಲೀಸರ ತಂಡಕ್ಕೆ ಹಸ್ತಾಂತರವಾಗಲಿದೆ.

ನಿನ್ನೆ ಕಾಮುಕರನ್ನು ಪೊಲೀಸರು ಬಂಧಿಸಿದ ಬಳಿಕ ಕರ್ನಾಟಕ ಪೊಲೀಸ್ ಕಾರ್ಯವೈಖರಿಯನ್ನು ಮೆಚ್ಚಿ ಟ್ವೀಟ್ ಮಾಡಿದ್ದ ಜಗ್ಗೇಶ್ 1 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದರು. ಅದರಂತೆ ತಮ್ಮ ಮಾತು ಉಳಿಸಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ