ಬೆಂಗಳೂರು: ಡ್ರಗ್ ದಂಧೆಗೆ ಸಂಬಂಧಪಟ್ಟಂತೆ ನ್ಯಾಯಾಂಗ ಬಂಧನದಲ್ಲಿರುವ ನಟಿಯರಾದ ಸಂಜನಾ ಗಲ್ರಾನಿ, ರಾಗಿಣಿಗೆ ಇಂದು ಬಿಡುಗಡೆಯ ಭಾಗ್ಯವಿಲ್ಲ.
ಇಂದು ಜಾಮೀನು ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಾಲಯ, ನಾಳೆಗೆ ವಿಚಾರಣೆ ಮುಂದೂಡಿದೆ. ಇದರಿಂದಾಗಿ ಪರಪ್ಪನ ಅಗ್ರಹಾರದಲ್ಲೇ ಅವರು ಬಂಧಿಯಾಗಬೇಕಾಗಿದೆ. ಇಬ್ಬರ ವಿರುದ್ಧವೂ ಹಲವು ಸಾಕ್ಷ್ಯಗಳು ಇರುವುದರಿಂದ ಜಾಮೀನಿಗೆ ತೊಡಕಾಗುತ್ತಿದೆ.