ಡ್ರಗ್ ಮಾಫಿಯಾ: ರಾಜಕಾರಣಿಗಳ ಮಕ್ಕಳಿಗೂ ಐಎಸ್ ಡಿ ನೋಟಿಸ್

ಗುರುವಾರ, 24 ಸೆಪ್ಟಂಬರ್ 2020 (11:30 IST)
ಬೆಂಗಳೂರು: ಡ್ರಗ್ ದಂಧೆಗೆ ಸಂಬಂಧಪಟ್ಟಂತೆ ಕೇವಲ ಸಿನಿಮಾ ಮಂದಿ ಮಾತ್ರವಲ್ಲ, ರಾಜಕಾರಣಿಗಳ ಮಕ್ಕಳಿಗೂ ವಿಚಾರಣೆಗೆ ಹಾಜರಾಗಲು ಆಂತರಿಕ ಭದ್ರತಾ ದಳ ಐಎಸ್ ಡಿ ನೋಟಿಸ್ ನೀಡಿದೆ.


ಮೂಲಗಳ ಪ್ರಕಾರ ಇಬ್ಬರು ರಾಜಕಾರಣಿಗಳ ಮಕ್ಕಳಿಗೆ ನೋಟಿಸ್ ನೀಡಲಾಗಿದೆ. ಆದರೆ ಅವರ ವಿವರಗಳನ್ನು  ಬಹಿರಂಗಗೊಳಿಸಲಾಗಿಲ್ಲ. ಹೀಗಾಗಿ ಪ್ರಭಾವಿ ರಾಜಕಾರಣಿಗಳ ಮಕ್ಕಳಿಗೇ ನೋಟಿಸ್ ಬಂದಿದೆಯೇ ಎಂಬ ಅನುಮಾನ ಮೂಡಿದೆ. ಈಗಾಗಲೇ ಹಲವು ಕಿರುತೆರೆ ನಟರನ್ನು ಐಎಸ್ ಡಿ ವಿಚಾರಣೆಗೊಳಪಡಿಸಿದೆ. ಇದೀಗ ರಾಜಕೀಯ ನಾಯಕರ ಬುಡಕ್ಕೆ ಕೈ ಹಾಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ