ಸ್ಯಾಂಡಲ್ ವುಡ್ ಸಿನಿಮಾಗಳ ಮೇಲೆ ಡ್ರಗ್ ಮಾಫಿಯಾ ಹೇಗೆ ಪ್ರಭಾವ ಬೀರುತ್ತೆ?

ಗುರುವಾರ, 17 ಸೆಪ್ಟಂಬರ್ 2020 (09:35 IST)
ಬೆಂಗಳೂರು: ಲಾಕ್ ಡೌನ್, ಕೊರೋನಾದಿಂದಾಗಿ ತತ್ತರಿಸಿ ಹೋಗಿದ್ದ ಚಿತ್ರರಂಗಕ್ಕೆ ಈಗ ಡ್ರಗ್ ಮಾಫಿಯಾ ಬರಸಿಡಿಲಿನಂತೆ ಬಂದೆರಗಿದೆ.


ಡ್ರಗ್ ಮಾಫಿಯಾ ಮುಂಬರುವ ಚಿತ್ರಗಳ ಮೇಲೆ ಪರಿಣಾಮ ಬೀರುತ್ತಾ? ಇದು ಆರೋಪಿಗಳಾಗಿರುವವರಿಗೆ ಮಾತ್ರ ಸೀಮಿತವಾ?

ಈಗಾಗಲೇ ಸಿಸಿಬಿಯಿಂದ ಬಂಧಿತರಾಗಿರುವ ರಾಗಿಣಿ ಕೆಲವು ಸಿನಿಮಾ ಒಪ್ಪಿಕೊಂಡಿದ್ದಾರೆ. ಆ ಸಿನಿಮಾ ಚಿತ್ರೀಕರಣಕ್ಕೆ ಅವರ ಸದ್ಯದ ಪರಿಸ್ಥಿತಿ ಅಡ್ಡಿಯಾಗಲಿದೆ. ಅಲ್ಲದೆ, ಅಭಿಮಾನಿಗಳು ಮುಂದೆ ಅವರನ್ನು ಹೇಗೆ ಸ್ವೀಕರಿಸುತ್ತಾರೆ ಎನ್ನುವುದೂ ನಿರ್ಮಾಪಕರಿಗೆ ತಲೆನೋವಾಗಲಿದೆ. ಇದಲ್ಲದೆ, ಇನ್ನೂ ಮತ್ತಷ್ಟು ನಟ-ನಟಿಯರು ಸಿಸಿಬಿ ಖೆಡ್ಡಾಕ್ಕೆ ಬಿದ್ದರೂ ಅಚ್ಚರಿಯಿಲ್ಲ. ಹಾಗಿರುವಾಗ ಆ ನಟ-ನಟಿಯರ ಚಿತ್ರೀಕರಣಕ್ಕೆ ತೊಂದರೆಯಾಗೋದು ಖಂಡಿತಾ. ಹಾಗಾಗಿ ಈಗಾಗಲೇ ಬಂಧಿತರಾಗಿರುವವರು ಯಾರ ಹೆಸರು ಬಾಯ್ಬಿಡುತ್ತಾರೋ, ಯಾವ ಕಲಾವಿದರಿಗೆ ಯಾವಾಗ ಸಿಸಿಬಿಯಿಂದ ಕರೆಬರುತ್ತದೋ, ಒಮ್ಮೆ ವಿಚಾರಣೆಯಾದ ಮೇಲೆ ಅವರನ್ನು ಜನ ಹೇಗೆ ಸ್ವೀಕರಿಸುತ್ತಾರೆ ಎಂಬಿತ್ಯಾದಿ ವಿಚಾರಗಳು ಸಿನಿಮಾ ರಂಗದ ಮೇಲೆ ಪ್ರಭಾವ ಬೀರಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ